fbpx
ಸಮಾಚಾರ

15ವರ್ಷಗಳ ಬಳಿಕ ತಿರುಪತಿಯಲ್ಲಿ ಈ ಸೇವೆ ಪುನರಾರಂಭ: ಟಿಕೆಟ್ ದರ ಕೇಳಿ ಬೆಚ್ಚಿಬಿದ್ದ ಭಕ್ತಾದಿಗಳು

ಜಗತ್ತಿನ ಶ್ರೀಮಂತ ದೇವಾಲಯ ಎಂದೇ ಪ್ರಸಿದ್ದಿ ಪಡೆದಿರುವ ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಲಕ್ಷಾಂತರ ಅಭಿಮಾನಿಗಳು ಆಗಮಿಸುತ್ತಾರೆ.. ಜೀವನದಲ್ಲಿ ಒಮ್ಮೆಯಾದರೂ ತಿಮ್ಮಪ್ಪನನ್ನು ಕಣ್ತುಂಬಿಕೊಂಡರೆ ಜನ್ಮ ಪಾವನವಾಗುತ್ತದೆ ಎಂಬುದು ಭಕ್ತರ ನಂಬಿಕೆ. ತಿಮ್ಮಪ್ಪನ ದೇವಾಲಯದಲ್ಲಿ ಹದಿನೈದು ವರ್ಷಗಳ ನಂತರ ಅಪರೂದ ಸೇವೆಯನ್ನು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಪುನರ್ ಆರಂಭಿಸಿದೆ.

ಕೆಲವೇ ಕೆಲವು ಸೆಕೆಂಡ್ ನಷ್ಟು ಮಾತ್ರ ದೇವರನ್ನು ನೋಡಲು ಅವಕಾಶವಿರುವ ಈ ದೇವಾಲಯದಲ್ಲಿ, ಸ್ಥಿತಿವಂತರು ದುಡ್ಡು ಕೊಟ್ಟರೆ ದಿನವಿಡೀ ದೇವರ ಮುಂದೆ ಕೂತು ಎಲ್ಲಾ ಪೂಜೆ/ಅಭಿಷೇಕಗಳನ್ನು ಮತ್ತೆ ಆರಂಭವಾದ ಸೇವೆಯ ಮೂಲಕ ನೋಡಬಹುದಾಗಿದೆ.

ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಬೆಳಗ್ಗಿನ ಸುಪ್ರಭಾತ ಸೇವೆಯಿಂದ ರಾತ್ರಿಯ ಉಂಜಲ ಸೇವೆಯವರೆಗಿನ ದಿನದ ಎಲ್ಲಾ ಅರ್ಜಿತಾ ಸೇವೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವ ‘ಉದಯಾಸ್ತಮಾನ ಅರ್ಜಿತಾ ಸೇವಾ’ ಟಿಕೆಟ್‌ಗಳನ್ನು ಭಕ್ತರಿಗೆ ಹಂಚಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿರ್ಧರಿಸಿದೆ.

ಒಟ್ಟು 530 ಟಿಕೆಟ್‌ಗಳನ್ನು ಭಕ್ತರಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಟಿಕೆಟ್‌ ಪಡೆದವರು ನಿಗದಿತ ದಿನದಂದು, ವರ್ಷದಲ್ಲಿ ಒಮ್ಮೆಯಂತೆ 25 ವರ್ಷಗಳ ಕಾಲ ಈ ಸೇವೆಯಲ್ಲಿ ಭಾಗವಹಿಸಬಹುದಾಗಿದೆ. ‘ಉದಯಾಸ್ತಮಾನ ಅರ್ಜಿತಾ ಸೇವಾ’ ಟಿಕೆಟ್‌ ದರ 1 ಕೋಟಿ ರೂ. ಇರಲಿದೆ.

ಉದಯಾಸ್ತಮಾನ ಅರ್ಜಿತಾ ಸೇವೆಯನ್ನು 1981ರಲ್ಲಿ ಆರಂಭಿಸಲಾಗಿತ್ತು. ಆದರೆ 1995ರಲ್ಲಿ ನಿಲ್ಲಿಸಲಾಗಿತ್ತು. ಬಳಿಕ 2006ರಲ್ಲಿ ಮತ್ತೆ ಈ ಸೇವೆಯನ್ನು ಅಧಿಕೃತವಾಗಿ ಆರಂಭಿಸಲಾಗಿತ್ತು. ಆಗ ಈ ಸೇವಾ ಟಿಕೆಟ್‌ ದರ 1 ಲಕ್ಷ ರೂ. ಇತ್ತು. ಸುಮಾರು 2600 ಟಿಕೆಟ್‌ಗಳು ಬುಕ್‌ ಆಗಿದ್ದವು. 531 ಟಿಕೆಟ್‌ಗಳನ್ನು ವಿವಿಧ ಕಾರಣಗಳಿಂದ ಭಕ್ತರು ಬಳಸಿರಲಿಲ್ಲ. ಬಳಕೆಯಾಗದ ಇದೇ ಟಿಕೆಟ್‌ಗಳನ್ನು ತಲಾ 1 ಕೋಟಿ ರೂ.ಗೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top