2021ರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-೩ ಬಿಡುಗಡೆಗೊಂಡು ಉತ್ತಮ ಯಶಸ್ಸು ಗಳಿಸಿತ್ತು. ಇನ್ನು ಅವರ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ವಿಕ್ರಾಂತ್ ರೋನಾ ಶೂಟಿಂಗ್ ಮುಗಿದು ವರ್ಷವೇ ಕಳೆದಿದ್ದರೂ ಬೇರೆ ಮತ್ಯಾವುದೇ ಸಿನಿಮಾಗಳಲ್ಲಿ ಸುದೀಪ್ ನಟಿಸಿರಲಿಲ್ಲ. ಹಾಗಾಗಿ ವಿಕ್ರಾಂತ್ ರೋನಾ ನಂತರ ಸುದೀಪ್ ಅವರ ಮುಂದಿನ ಸಿನಿಮಾ ಯಾವುದೇ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಇದೀಗ ಆ ಎಲ್ಲಾ ಪ್ರಶ್ನೆಗೆ ಸ್ವತಃ ಸುದೀಪ್ ಅವರೇ ಉತ್ತರ ನೀಡಿದ್ದಾರೆ.
Finally Finally Answer Is Here
Boss Next Project With #VenkatPrabhuOfficial Confirm 📣#VikrantRona | #KicchaSudeep | @KicchaSudeep pic.twitter.com/nxehJkc0U5
— Ruler Kiccha …🤫 (@RulerKiccha) January 2, 2022
ವಿಕ್ರಾಂತ್ ರೋಣ ನಂತರ ಸುದೀಪ್ಗೆ ತಮಿಳು ನಿರ್ದೇಶಕನ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ. ನಟ ಸುದೀಪ್ ಅವರಿಗೂ ಕಥೆ ಓಕೆ ಆಗಿದೆ. ಚಿತ್ರವನ್ನು ಈ ಬಗ್ಗೆ ಸಂದರ್ಶನ ಒಂದರಲ್ಲಿ ಅಧಿಕೃತವಾಗಿ ಕಿಚ್ಚ ಸುದೀಪ್ ಅವರೇ ಪ್ರಕಟ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗೆ ತಮಿಳು ನಿರ್ದೇಶಕ ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳಲಿದ್ದಾರೆ.
ಬಾಲಿವುಡ್ ಯೂಟ್ಯೂಬ್ ಚಾನೆಲ್ ಒಂದರ ಜೊತೆ ನೀಡಿದ ಸಂದರ್ಶನದಲ್ಲಿ ಸುದೀಪ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. “ನನ್ನ ಮುಂದಿನ ಸಿನಿಮಾಗೆ ವೆಂಕಟ್ ಪ್ರಭು ನಿರ್ದೇಶನ ಮಾಡಲಿದ್ದಾರೆ. ಕತೆ ತುಂಬಾ ಚೆನ್ನಾಗಿದೆ ನನಗೆ ಇಷ್ಟವಾಯಿತು.. ನಂತರ ಸಾಹೂ ನಿರ್ದೇಶಕ ಸುಜಿತ್ ಅವರ ಜೊತೆಯೂ ಒಂದು ಸಿನಿಮಾ ಖಚಿತವಾಗಿದೆ.” ಎಂದು ಸುದೀಪ್ ಹೇಳಿದರು. ಜೊತೆಯಲ್ಲಿ ಅನೂಪ್ ನಿರ್ದೇಶನದಲ್ಲಿ ಮೂಡಿಬರಲಿರುವ ಅಶ್ವತ್ತಾಮ ಚಿತ್ರಕ್ಕೂ ಸುದೀಪ್ ಅವರೇ ನಾಯಕ ಎಂಬ ವಿಚಾರವನ್ನು ಕೂಡ ಹಂಚಿಕೊಂಡರು.
ಅಂದಹಾಗೆ ನಿರ್ದೇಶಕ ವೆಂಕಟ್ ಪ್ರಭು 2007 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ‘ಮಂಗಾತ’, ‘ಮಾನಾಡು’ ಅಂತಹ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
