ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಮಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೆಹಮಾನ್ ಪುತ್ರಿ ಖತೀಜಾ ರೆಹಮಾನ್ ಅವರನ್ನು ರಿಯಾಸ್ದೀನ್ ಶೇಖ್ ಮೊಹಮ್ಮದ್ ಅವರು ಮದುವೆ ಆಗಲಿದ್ದಾರೆ. ಎಂಗೇಜ್ಮೆಂಟ್ ಬಳಿಕ ಈ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಖತೀಜಾ ಅವರು ಹಂಚಿಕೊಂಡಿದ್ದಾರೆ.
View this post on Instagram
ದೇವರ ಆಶೀರ್ವಾದದಿಂದ ರಿಯಾಸ್ದೀನ್ ಶೇಖ್ ಮೊಹಮ್ಮದ್ ಜೊತೆ ನನ್ನ ನಿಶ್ಚಿತಾರ್ಥ ನೆರವೇರಿತು ಅಂತ ತಿಳಿಸಲು ಖುಷಿ ಆಗುತ್ತಿದೆ. ರಿಯಾಸ್ದೀನ್ ಶೇಖ್ ಮೊಹಮ್ಮದ್ ಅವರು ಓರ್ವ ಉದ್ಯಮಿ ಮತ್ತು ಆಡಿಯೋ ಇಂಜಿನಿಯರ್ ಆಗಿದ್ದಾರೆ. ನನ್ನ ಹುಟ್ಟುಹಬ್ಬದ ದಿನವೇ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು ಎಂದು ಖತೀಜಾ ರೆಹಮಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.
ರೆಹಮಾನ್ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಖತೀಜಾ ಹಿರಿಯ ಮಗಳು. ಅಪ್ಪನಂತೆ ಸಂಗೀತದತ್ತ ಆಸಕ್ತಿ ಹೊಂದಿರುವ ಖತೀಜಾ ಕೂಡ ಸಂಗೀತಗಾರ್ತಿ. ಖತೀಜಾಗೆ ಮದುವೆ ಫಿಕ್ಸ್ ಆಗಿರುವ ಸುದ್ದಿ ತಿಳಿದ ಅಭಿಮಾನಿಗಳು, ನೆಟ್ಟಿಗರು, ಸಿನಿ ರಂಗದವರು, ಗಣ್ಯರು ಶುಭಕೋರಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
