fbpx
ಸಮಾಚಾರ

ರಾಜ್​ ಶೆಟ್ಟಿಗೆ ಶಿವಣ್ಣನ ಸರ್ಪ್ರೈಸ್ ಕಾಲ್.

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟ ಹಾಗು ಕನ್ನಡದ ಪ್ರತಿಭಾನ್ವಿತ ನಟ ರಾಜ್ ಬಿ ಶೆಟ್ಟಿಗೆ ಸರ್ಪ್ರೈಸ್ ಕರೆ ಮಾಡಿ ‘‘ಮಂಗಳಾದೇವಿ ನೀನೇನು ದೊಡ್ಡ ಡಾನಾ?’’ ಕಾಲು ಎಳೆದಿದ್ದಾರೆ. ಯಾರು ಎಂದು ಗೊಂದಲದಲ್ಲಿ ರಾಜ್ ಶೆಟ್ಟಿ ಅಲ್ಲೇ ಬರ್ಲಾ? ನಾನೋ ನೀನೋ ನೋಡೇ ಬಿಡೋಣ ಉತ್ತರ ಕೊಟ್ಟು ಜೊತೆಗೆ ನೀವ್ಯಾರು ಎಂದು ಕೇಳಿದ್ದಾರೆ. ಆಗ ಶಿವಣ್ಣ ‘‘ನಾನು ಭಜರಂಗಿ’’ ಎಂದು ಹೇಳಿ ನಕ್ಕಿದ್ದಾರೆ. ಆಮೇಲೆ ಯೋಚಿಸಿದ ರಾಜ್ ಶೆಟ್ಟಿಗೆ ಅರಿವಾಗಿದೆ. ನಂತರ ಇಬ್ಬರೂ ಮಾತನ್ನು ಮುಂದುವರೆಸಿದರು.

ಶಿವಣ್ಣ ಮತ್ತು ಶಿವನ Powerful Conversation 🔥
‘ಗರುಡ ಗಮನ ವೃಷಭ ವಾಹನ’ Premieres on 13th Jan on
#ZEE5 #GarudaGamanaVrishabhaVahana #RajBShetty #RishabShetty #ZEE5 #ZEE5Kannada @RajbShettyOMK @NimmaShivanna @shetty_rishab @rakshitshetty @ParamvahStudios @Synccinema @lighterbuddha pic.twitter.com/c41DCEji3I

— ZEE5 Kannada (@ZEE5Kannada) January 4, 2022

“>

ರಾಜ್ ಶೆಟ್ಟಿ ಶಿವಣ್ಣನಿಗೆ ನೀವು ಭಜರಂಗಿ ಮಾಡಿದ ನಂತರ ನಮ್ಮ ಗರುಡ ಗಮನಕ್ಕೆ ಬಂದಿರಿ. ಆದ್ದರಿಂದ ನೀವೇ ದೊಡ್ಡ ಡಾನ್’’ ಎಂದು ರಾಜ್ ಶೆಟ್ಟಿ ಶಿವಣ್ಣನಿಗೆ ತಮಾಷೆ ಮಾಡಿದರು. ಶಿವಣ್ಣ ಗರುಡ ಗಮನ ಚಿತ್ರವನ್ನು ನೋಡಿದ್ದೇನೆ ಬಹಳ ಸರಳವಾಗಿ ಅಭಿನಯಿಸುತ್ತೀರಿ ಎಂದು ರಾಜ್ ಶೆಟ್ಟಿಗೆ ಹೊಗಳಿದ್ದಾರೆ. ಹಾಗೆ ಸಂತಸದ ವಿಚಾರದಲ್ಲಿ ರಾಜ್ ಹಾಗೂ ಸಂಭಾಷಣೆಯ ಮೂಲಕ ಜೀ5 ‘ಗರುಡ ಗಮನ…’ದ ಬಿಡುಗಡೆಯ ದಿನಾಂಕವನ್ನು ಹೇಳಿದರು. ಈಗಾಗಲೇ ಸಿನಿಮಾ ಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿ ಅತ್ಯುತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಇದಾಗಿದೆ ಹಾಗು ಜನವರಿ 13ರಿಂದ ಪ್ರಸಾರ ಕೂಡ ಆಗಲಿದೆ. ಸಂಕ್ರಾಂತಿ ಹಬ್ಬದ ಮರುದಿನವೇ ಚಿತ್ರ ಬಿಡುಗಡೆಯಾಗುತ್ತಿರುವುದು ಜನರಿಗೆ ಖುಷಿ ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top