2021ರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-೩ ಬಿಡುಗಡೆಗೊಂಡು ಉತ್ತಮ ಯಶಸ್ಸು ಗಳಿಸಿತ್ತು. ಇನ್ನು ಅವರ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ವಿಕ್ರಾಂತ್ ರೋನಾ ಶೂಟಿಂಗ್ ಮುಗಿದು ವರ್ಷವೇ ಕಳೆದಿದ್ದರೂ ಬೇರೆ ಮತ್ಯಾವುದೇ ಸಿನಿಮಾಗಳಲ್ಲಿ ಸುದೀಪ್ ನಟಿಸಿರಲಿಲ್ಲ. ಹಾಗಾಗಿ ವಿಕ್ರಾಂತ್ ರೋನಾ ನಂತರ ಸುದೀಪ್ ಅವರ ಮುಂದಿನ ಸಿನಿಮಾ ಯಾವುದೇ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ.
ವಿಕ್ರಾಂತ್ ರೋಣ ಸಿನಿಮಾ ನಂತರ ಸುದೀಪ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕಿಚ್ಚ ಸುದೀಪ್ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿದ ಕಿಚ್ಚನ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಅಷ್ಟಕ್ಕೂ ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ ನಿಜನಾ?ಸುದೀಪ್ ಅವರ ಮುಂದಿ ಸಿನಿಮಾದ ಟೈಟಲ್(Title) ಏನು? ನಿರ್ದೇಶಕ ಯಾರು? ನಿರ್ಮಾಪಕ ಯಾರು? ಅಂತೀರಾ ಮುಂದೆ ಓದಿ
ಸಾಹೋ ಖ್ಯಾತಿಯ ನಿರ್ದೇಶಕ ಸುಜಿತ್ ಜೊತೆ ಸುದೀಪ್ ಅವರು ಸಿನಿಮಾ ಮಾಡಲು ಒಪ್ಪಿರುವುದಾಗಿ ಸುದೀಪ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಆ ಚಿತ್ರಕ್ಕೆ ಸಂಭಂದಿಸಿದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೈಯಲ್ಲಿ ಮೇಣದ ಬತ್ತಿ ಹಿಡಿದು ಏನನ್ನೋ ಹುಡುಕುತ್ತಿರುವ ಹಾಗೆ ಸುದೀಪ್ ಅವರನ್ನು ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಅಲ್ಲದೆ ಪೋಸ್ಟರ್ ನಲ್ಲಿ ‘ನಮಸ್ತೆ ಗೋಷ್ಟ್’ ಎನ್ನುವ ಟೈಟಲ್ ಅನ್ನು ಕೂಡ ಹಾಕಿದ್ದಾರೆ. ‘ಡೋಂಟ್ ಸ್ಟಾಪ್ ದಿ ಗೇಮ್’ ಎನ್ನುವ ಟ್ಯಾಗ್ ಲೈನ್ ಇದೆ. ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ, ಈ ಪೋಸ್ಟರ್ ಅಧಿಕೃತ ಅಲ್ಲ. ಇದು ಅಭಿಮಾನಿಗಳು ತಯಾರಿಸಿದ ಪೋಸ್ಟರ್ ಎನ್ನಲಾಗಿದೆ. ಜೊತೆಗೆ ‘ನಮಸ್ತೆ ಗೋಷ್ಟ್’ ಎನ್ನುವ ಈ ಟೈಟಲ್ ಕೂಡಾ ಫೇಕ್ ಎಂದು ಹೇಳಲಾಗಿದೆ.
Here’s the title and first look of My Next Project with @KicchaSudeep @deepikapadukone @RanaDaggubati @shanvisrivastav @geneliad @Rameshkumar pic.twitter.com/RZ59qbwbT6
— Sujith (@saahosujithmk) January 3, 2022
ನಿರ್ದೇಶಕ ಸುಜಿತ್ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಈ ಪೋಸ್ಟರ್ ಗಳನ್ನ ಟ್ವೀಟ್ ಮಾಡಲಾಗಿದ್ದು ಇದು ಫೇಕ್ ಎಂದು ಸುದೀಪ್ ಅಭಿಮಾನಿಗಳೇ ತೀರ್ಮಾನಕ್ಕೆ ಬಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
