fbpx
ಸಮಾಚಾರ

ಸುದ್ದಿಯಾಗದೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಶುಭ ಪೂಂಜಾ: ಬಹುಕಾಲದ ಗೆಳೆಯನ ಜೊತೆ ಸರಳ ವಿವಾಹ

ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭ ಪೂಂಜಾ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್ ನಿಯಮಾವಳಿಗಳು ಜಾಲಾರಿಯಲ್ಲಿರುವುದರಿಂದ ಹೆಚ್ಚು ಸದ್ದು ಮಾಡದೆ ಸುದ್ದಿಯಾಗದೆ ಶುಭ ಪೂಂಜಾ ಅವರು ತಮ್ಮ ಬಹುಕಾಲದ ಗೆಳಯ ಸುಮಂತ್ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಶುಭ ಪೂಂಜಾ ಮತ್ತು ಸುಮಂತ್ ಸಪ್ತಪದಿ ತುಳಿದಿದ್ದಾರೆ. ಈ ವೇಳೆ ಎರಡೂ ಕುಟುಂಬದ ಸದಸ್ಯರು ಮಾತ್ರ ಉಪಸ್ಥಿತರಿದ್ದರು. ಹಾಗೆಯೆ ಶುಭ ಪೂಂಜಾ ಅವರ ಆತ್ಮೀಯ ಸ್ನೇಹ ಬಳಗ ಕೂಡ ಮದುವೆಗೆ ಆಗಮಿಸಿ ನವ ವದು ವರರಿಗೆ ಹಾರೈಸಿದ್ದಾರೆ.

 

 

ತಾವು ಮದುವೆಯಾದ ವಿಚಾರವನ್ನು ಇನ್ಸ್ಟಾಗ್ರಾಮ್ ನಲ್ಲಿ ಶುಭ ಪೂಂಜ್ ಹಂಚಿಕೊಂಡಿದ್ದಾರೆ.. ತಮ್ಮ ಪತಿಯ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿರುವ ಶುಭ ಪೂಂಜಾ “ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು 🙏 ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು❤️ ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ” ಎಂದು ಬರೆದುಕೊಂಡಿದ್ದಾರೆ.

 

ಅಂದಹಾಗೆ ನಟಿ ಶುಭ ಪೂಂಜಾ ಮದುವೆ ಕುರಿತಾಗಿ ಕಳೆದ ವರ್ಷದದಿಂದ ಸುದ್ದಿಯಾಗುತ್ತಲೇ ಇದೆ. ಲಾಕ್ ಡೌನ್, ಬಿಗ್ ಬಾಸ್ ಮುಂತಾದ ಕಾರಣಕ್ಕೆ ಶುಭಾ ಪೂಂಜಾ ಮದುವೆ ಮುಂದು ಹೋಗುತ್ತಲೇ ಇತ್ತು. ಇದೀಗ ಅಂತಿಮವಾಗಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top