ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಪ್ಪು ಪ್ರೋಮೋ ಶೇರ್ ಮಾಡಿದ್ದಕಾಗಿ ಸಚಿನ್ ತಂಡವನ್ನು ಕ್ಷಮೆ ಕೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಬಚ್ಚನ್ ತಪ್ಪು ಪ್ರೋಮೋವನ್ನು ಹಂಚಿಕೊಂಡಿದ್ದರು. ಆದರೆ ಸಚಿನ್ ಇದರಲ್ಲಿ ಭಾಗವಹಿಸುತ್ತಿಲ್ಲ ಹಾಗಾಗಿ ತಪ್ಪು ಪ್ರೋಮೊಯಿಂದ ಸಚಿನ್ ಅಭಿಮಾನಿಗಳಿಗೆ ದಾರಿತಪ್ಪುವಂತೆ ಮಾಡಿದೆ.
ಇದ್ದಕ್ಕೆ ಕಾರಣವಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಈ ಪ್ರೋಮೋವನ್ನು ನಾನು ಬೇಕೆಂದು ಹಾಕಲಿಲ್ಲ ಸರಿಯಾದ ಮಾಹಿತಿ ನನಗೆ ಸಿಗದ ಕಾರಣ ಈ ರೀತಿಯ ತಪ್ಪು ನಡೆದಿದೆ ಎಂದು ಕ್ಷೆಮೆಯನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಆ ಪ್ರೊಮೋದಲ್ಲಿ ಈಗ
T 4152 – CORRECTION : Legends League Cricket T20 , FINAL promo .. apologies .. and regrets for any inconvenience caused .. the error was inadvertent .. 🙏🙏🙏#legendsleaguecricket #bosslogonkagame pic.twitter.com/Zo33KqZxKU
— Amitabh Bachchan (@SrBachchan) January 8, 2022
“>
ಸಚಿನ್ ತೆಂಡೂಲ್ಕರ್ ಅವರು ಟೂರ್ನಿಮೆಂಟ್ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರ ಹೆಸರನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಹಿನ್ನಲೆಯಲ್ಲಿ ಸಚಿನ್ ತಂಡದವರು ಅಭಿಮಾನಿಗಳಿಗೆ ತಪ್ಪು ಮಾಹಿತಿಯನ್ನು ಕೊಡಬೇಡಿ ಏಕೆಂದರೆ ಸಚಿನ್ ಅವರು ಈ ಟೂರ್ನಿಮೆಂಟ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಂದ್ಯಾವಳಿಯು ಜನವರಿ 20 ರಂದು ಓಮನ್ನ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ. ಕ್ರಿಕೆಟ್ ಅಭಿಮಾನಿಗಳು ಪಂದ್ಯಾವಳಿ ಪ್ರಾರಂಭವಾಗುವುದನ್ನು ಕಾಯುತ್ತಿದ್ದಾರೆ. ಅದಕ್ಕೆ ಇಂದು ಬಿಗ್ ಬಿ ಎಲ್ಎಲ್ಸಿ ಹೊಸ ಪ್ರೋಮೋವನ್ನು ಹಂಚಿಕೊಂಡು ಹಾಗೆ ಕ್ಷಮೆಯನ್ನು ಕೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
