fbpx
ಸಮಾಚಾರ

ಮೇಕೆದಾಟು ಜಾರಿಯಾಗಬಾರದು: “ಇದು ಪಾದಯಾತ್ರೆಯಲ್ಲ, ‘ಕಾರು’ ಯಾತ್ರೆ” ಕಾಂಗ್ರೆಸ್ ವಿರುದ್ಧ ಚೇತನ್ ವಾಗ್ದಾಳಿ

ಮೇಕೆದಾಟು ಯೋಜನೆ ಆರಂಭಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಕಾರ್ಯಕ್ರಮ ಕೊರೋನಾ ಅಬ್ಬರದ ನಡೆವೆಯೂ ಭರದಿಂದ ಸಾಗುತ್ತಿದೆ. ಕಳೆದ ಭಾನುವಾರ ಆರಂಭಗೊದ ಈ ಪಾದಯಾತ್ರೆ ಸದ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಕಾಂಗ್ರೆಸ್ ನಾಯಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾದಯಾತ್ರೆ ನಡೆಸುತ್ತಿದ್ದಾರೆ.

 

 

ಆದರೆ ನಟ ಚೇತನ್ ಅಹಿಂಸ ಮೇಕೆದಾಟು ಯೋಜನೆಯನ್ನು ಹಾಗೂ ಮೇಕೆದಾಟು ಪಾದಯಾತ್ರೆಯನ್ನು ಖಂಡಿಸಿದ್ದಾರೆ. ಜನರಿಗಷ್ಟೇ ಇದು ‘ಪಾದ – ಯಾತ್ರೆ’, ನೇತಾರಿಗೆ ಇದು ‘ಕಾರ್-ಯಾತ್ರೆ” ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಬರೆದುಕೊಂಡಿರುವ ನಟ ಚೇತನ್ ಅಹಿಂಸ, ”ಇಂದು ಮೇಕೆದಾಟವಿಗೆ ಹೋಗುವ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 9,000 ಕೋಟಿ ರೂಪಾಯಿಯ ವಿನಾಶಕಾರಿ ಅಣೆಕಟ್ಟು ಯೋಜನೆಯ ಪರವಾಗಿ ನಡೆಯುತ್ತಿದ್ದ ಪಾದಯಾತ್ರೆಯನ್ನು ಕಂಡೆ. ಹಲವಾರು ಜನರು ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಕಾಂಗ್ರೆಸ್ ಪಕ್ಷದ ರಾಜಕಾರಣಿಗಳೆಲ್ಲಾ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು. ಜನರಿಗಷ್ಟೇ ಇದು ‘ಪಾದ – ಯಾತ್ರೆ’, ನೇತಾರಿಗೆ ಇದು ‘ಕಾರ್-ಯಾತ್ರೆ” ಎಂದು ಟೀಕಿಸಿದ್ದಾರೆ.

ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ
ಇನ್ನು ಜನವರಿ 14 2022 ರಂದು ಪರಿಸರ ಹೋರಾಟಗಾರ್ತಿ ಎಂದು ಹೆಸರುವಾಸಿಯಾದ ಮೇಧಾ ಪಾಟ್ಕರ್ ಅವರ ಸಮ್ಮುಖದಲ್ಲಿ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಈ ಸಂದರ್ಭದಲ್ಲಿ ನಾವು ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ರಾಜ್ಯಸರ್ಕಾರಕ್ಕೆ ಒತ್ತಡವನ್ನು ಹೇರುತ್ತವೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top