fbpx
ಸಮಾಚಾರ

ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಗೈರಾಗಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಮಧು ಬಂಗಾರಪ್ಪ

ಮೇಕೆದಾಟು ಯೋಜನೆ ಆರಂಭಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಕಳೆದ ಭಾನುವಾರ ಆರಂಭಗೊದ ಈ ಪಾದಯಾತ್ರೆ ಸದ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಕಾಂಗ್ರೆಸ್ ನಾಯಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾದಯಾತ್ರೆ ನಡೆಸುತ್ತಿದ್ದಾರೆ.

ಪಾದಯಾತ್ರೆ ಆರಂಭಕ್ಕೂ ಮುನ್ನ ಕನಕಪುರದ ಸಂಗಮದಲ್ಲಿ ಸಮಾವೇಶ ನಡೆಸಿ ಚಾಲನೆ ನೀಡಲಾಗಿತ್ತು. ಪಾದಯಾತ್ರೆಗೆ ನಟ ಶಿವರಾಜಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಶಿವರಾಜಕುಮಾರ್ ಪಾದಯಾತ್ರೆ ಸಮಾವೇಶದಕ್ಕೆ ಗೈರಾಗಿದ್ದರು.. ಅಷ್ಟಕ್ಕೂ ಶಿವಣ್ಣ ಪಾದಯಾತ್ರೆಗೆ ಗೈರಾಗಿದ್ದು ಯಾಕೆ ಎಂಬ ವಿಚಾರದ ಬಗ್ಗೆ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿರುವ ಮಧು ಬಂಗಾರಪ್ಪ. “ಶಿವಣ್ಣ ಅವರಿಗೆ ಅವರದ್ದೇ ಬೇರೆ ಕೆಲಸಗಳು ಇದ್ದಿದ್ದರಿಂದ ಅವರು ಕನಕಪುರದವರೆಗೆ ಬಂದು ವಾಪಸ್​ ಹೋಗಿದ್ದಾರೆ. ಅವರ ಕೈಯಲ್ಲೇ ಉದ್ಘಾಟನೆ ಮಾಡಿಸಬೇಕು ಎಂಬ ಉದ್ದೇಶ ಇತ್ತು. ಕೊವಿಡ್​ ಮುಂತಾದ ಕಾರಣದಿಂದ ಅವರಿಗೆ ಬರಲು ಸಾಧ್ಯವಾಗಿಲ್ಲ. ಚಿತ್ರರಂಗದ ಬೆಂಬಲ ನಮಗೆ ಇದೆ. ಶಿವಣ್ಣ ಅವರನ್ನು ನಾನು ನೇರವಾಗಿ ಈ ವಿಚಾರದ ಬಗ್ಗೆ ಭೇಟಿ ಮಾಡಿಲ್ಲ. ಅವರ ಬೆಂಬಲ ಇದ್ದೇ ಇರುತ್ತದೆ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top