fbpx
ಸಮಾಚಾರ

ಅಪ್ಪು ಇಲ್ಲವಾಗಿ 2 ತಿಂಗಳು ಕಳೆದರೂ ಅಣ್ಣಾವ್ರ ಕುಟುಂಬದ ಒಬ್ಬರಿಗೆ ಮಾತ್ರ ಇನ್ನೂ ಈ ವಿಚಾರ ತಿಳಿದೇ ಇಲ್ಲ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಸುಮಾರು ಎರಡೂವರೆ ತಿಂಗಳು ಗತಿಸಿಹೋಗಿದೆ. . ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಇದುವರೆಗೂ ಕರ್ನಾಟಕ ಜನರಿಗೆ ಸಾಧ್ಯವಾಗುತ್ತಿಲ್ಲ.. ಅಪ್ಪು ಆಗಲಿ 2 ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ..

ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ಬಗ್ಗೆ ಇಡೀ ಜಗತ್ತೇ ಚರ್ಚೆ ಮಾಡಿದೆ, ದೇಶ ವಿದೇಶಿ ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿವೆ. ಇಡೀ ಜಗತ್ತಿಗೆ ಅಪ್ಪು ಅಗಲಿರುವ ವಿಚಾರ ತಿಳಿದಿದೆ. ಆದರೆ ಅವರ ಕುಟುಂಬದ ಒಬ್ಬರಿಗೆ ಮಾತ್ರ ಆ ವಿಚಾರ ತಿಳಿದಿಲ್ಲ. ಈ ವಿಚಾರವನ್ನು ನಂಬಲು ಕೊಂಚ ಕಷ್ಟವೇ, ಆದರೂ ಅದು ಸತ್ಯ.

ಹೌದು, ಪುನೀತ್ ರಾಜ್​ಕುಮಾರ್​ ಅಗಲಿಕೆಯ ವಿಚಾರ ಡಾ.ರಾಜ್​ಕುಮಾರ್​ ಅವರ ಸಹೋದರಿ ನಾಗಮ್ಮ ಅವರಿಗೆ ಇನ್ನೂ ಗೊತ್ತಿಲ್ಲ. ಗಾಜನೂರಿನಲ್ಲಿರುವ ನಾಗಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರೀತಿಯ ಅಣ್ಣನ ಕಿರಿ ಮಗ ಇನ್ನಿಲ್ಲ ಎಂಬ ವಿಷಯ ಗೊತ್ತಾದರೆ ನಾಗಮ್ಮ ಅವರಿಗೆ ಆಘಾತವಾಗಬಹುದೆಂಬ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಷಯ ತಿಳಿಸಿಲ್ಲ.

ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಲಘು ಹೃದಯಾಘಾತ ಆದಾಗ, ನಾಗಮ್ಮ ಅವರಿಗೆ ದೊಡ್ಡ ಆಘಾತ ಆಗಿತ್ತಂತೆ. ಇನ್ನು ಅಪ್ಪು ವಿಚಾರ ಕೇಳಿದರೆ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗುವ ಸಾದ್ಯತೆ ಕೂಡ ಹಾಗಾಗಿ ಈ ವಿಚಾರವನ್ನು ಮುಚ್ಚಿಡಲಾಗಿದೆ. ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.

ನಾಗಮ್ಮ ಅವರಿಗೆ ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ತಿಳಿಯದಂತೆ ಕುಟುಂಬದವರು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಮನೆಯಲ್ಲಿ ಪುನೀತ್‌ ಫೋಟೊಗೆ ಹಾರ ಹಾಕಿ ಪೂಜೆ ಮಾಡಲ್ಲ, ಟಿವಿಯಲ್ಲಿ ಸುದ್ದಿ ವಾಹಿನಿಗಳನ್ನ ಹಾಕುವುದಿಲ್ಲ, ಯಾರೇ ಮನೆಗೆ ಬಂದರೂ ಅವರನ್ನು ನಾಗಮ್ಮರನ್ನು ಭೇಟಿ ಮಾಡಲು ಬಿಡುವುದಿಲ್ಲ. ಹೀಗೆ ಪುನೀತ್ ಸಾವಿನ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಕುಟುಂಬಸ್ಥರು.

ಅಂದಹಾಗೆ ಸೋದರತ್ತೆ ಎಂದರೆ ಅಪ್ಪುವಿಗೆ ಎಲ್ಲಿಲ್ಲದ ಪ್ರೀತಿ. ಹಾಗೆಯೇ ಡಾ.ರಾಜ್‍ಕುಮಾರ್ ಅವರ ಕಿರಿಯ ಪುತ್ರ ಎಂಬ ಕಾರಣಕ್ಕೆ ಪುನೀತ್ ಅವರನ್ನು ಕಂಡರೆ ನಾಗಮ್ಮ ಅವರಿಗೂ ತುಂಬಾ ವಾತ್ಸಲ್ಯ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ತಮಿಳುನಾಡಿನಲ್ಲಿರುವ ಗಾಜನೂರಿನ ಮನೆಗೆ ಹೋಗುತ್ತಿದ್ದುದೇ ತನ್ನ ಪ್ರೀತಿಯ ಸೋದರತ್ತೆ ನಾಗಮ್ಮ ಅವರನ್ನು ನೋಡಲು.

ಸಧ್ಯಕ್ಕೆ ಡಾ.ರಾಜ್ ಕುಟುಂಬದ ಅತ್ಯಂತ ಹಿರಿಯ ಜೀವ ಎನಿಸಿರುವ ನಾಗಮ್ಮ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒಂದು ವೇಳೆ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದರೆ ಆಘಾತವಾಗುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಅವರಿಗೆ ವಿಷಯ ತಿಳಿಯದಂತೆ ಗೌಪ್ಯತೆ ಕಾಪಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top