fbpx
ಸಮಾಚಾರ

ಹೆಸರು ಬದಲಾಯಿಸಿಕೊಂಡ ರಶ್ಮಿಕಾ? ಅಭಿಮಾನಿಗಳು ಗರಂ!

ಹೊಸ ಹೊಸ ಆಫರ್ ಗಳನ್ನು ಪಡೆಯುವ ಜತೆಗೆ ಒಂದಿಲ್ಲೊಂದು ಗಾಸಿಪ್ಪು, ಕಾಂಟ್ರೊವರ್ಸಿಗಳಿಂದ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಕನ್ನಡವೂ ಸೇರಿದಂತೆ ತೆಲುಗು, ತೆಮಿಳು ಚಿತ್ರರಂಗಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇಂಥಾ ರಶ್ಮಿಕಾ ಇದೀಗ ತಮ್ಮ ಹೆಸರನ್ನೇ ಬದಲಿಸಿಕೊಂಡರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

 

 

ಹೌದು, ಇತ್ತೀಚಿಗೆ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಪುಷ್ಪ’ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು ಸಿನಿಮಾದಲ್ಲಿ ರಶ್ಮಿಕಾ ಹೆಸರನ್ನು ತಪ್ಪಾಗಿ ತೋರಿಸಿರುವ ವಿಚಾರ ಗಮನಕ್ಕೆ ಬಂದಿದೆ. ಪೂರ್ಣಗೊಂಡ ನಂತರದಲ್ಲಿ ಕೊನೆಯಲ್ಲಿ ಎಲ್ಲಾ ಕಲಾವಿದರ ಫೋಟೋವನ್ನು ಹಾಕಿ ಹೆಸರು ತೋರಿಸಲಾಗಿದೆ. ರಶ್ಮಿಕಾ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ‘ರಶ್ಮಿಕಾ ಮಂದಣ್ಣ ಬದಲು, ರಸ್ಮಿಕಾ ಮಡೋನಾ’ ಎಂದು ಬರೆಯಲಾಗಿದೆ. ಚಿತ್ರತಂಡ ಮಾಡಿದ ಈ ಅಚಾತುರ್ಯಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ.

ರಶ್ಮಿಕಾ ಗಮನಕ್ಕೆ ಇದು ಬಂದಿದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಅಭಿಮಾನಿಗಳು ಕ್ಷಮೆ ಕೇಳಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ರಶ್ಮಿಕಾ ತಮ್ಮ ಹೆಸರನ್ನೇ ಬದಲಿಸಿಕೊಂಡಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮುಂದೊಂದು ದಿನ ತಮ್ಮ ಹೆಸರನ್ನು ಈ ರೀತಿ ಬದಲಾಯಿಸಿಕೊಂಡರೂ ಆಶ್ಚರ್ಯ ಇಲ್ಲ ಎಂದು ಕೆಲವರು ಮಾಮೂಲಿಯಾಗಿ ಕಾಲೆಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top