fbpx
ಸಮಾಚಾರ

OTTಯಿಂದ ‘ವಿಕ್ರಾಂತ್ ರೋಣ’ಗೆ 100 ಕೋಟಿ ಆಫರ್: ದಯಾಳ್ ಪದ್ಮನಾಭ್ ಶಾಕ್

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈಗಾಗಲೇ ಟೀಸರ್, ವಿಭಿನ್ನ ಪೋಸ್ಟರ್ಗಳ ಮೂಲಕ ಗಮನ ಸೆಳೆದಿರುವ ‘ವಿಕ್ರಾಂತ್ ರೋಣ’ ಚಿತ್ರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಸಿನಿಮಾ ರಿಲೀಸ್ ಕಡೆ ಗಮನಹರಿಸಿದೆ.

ವಿಕ್ರಾಂತ್ ರೋಣ ಚಿತ್ರತಂಡ ಫೆಬ್ರವರಿ 24ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ತಿಂಗಳ ಹಿಂದೆಯೇ ಘೋಷಿಸಿತ್ತು. ಆದರೆ ಸದ್ಯ ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಡುವೆ ಮತ್ತೆ ಲಾಕ್​ಡೌನ್​ ಮಾಡುವ ಎಲ್ಲ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸದ್ಯ ವಿಕ್ರಾಂತ್ ರೋಣ ಟೀಮ್ ಘೋಷಿರುವ ಫೆಬ್ರವರಿ ೨೪ರೆಂದು ಚಿತ್ರ ತೆರೆಕಾಣುವುದು ಅನುಮಾನದಂತೆ ಕಾಣುತ್ತಿದೆ.

 

 

ಈ ಮದ್ಯೆ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಎರಡು ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಆಫರ್‌ ಅನ್ನು ವಿಕ್ರಾಂತ್ ರೋಣ ನಿರ್ಮಾಪಕರ ಮುಂದಿಟ್ಟಿವೆ. ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ವದಂತಿಯ ಪ್ರಕಾರ ಓಟಿಟಿಯಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಹಣ ನೀಡಲು ಮುಂದೆ ಬಂದಿದೆ ಎಂದು ಭಾರಿ ಸುದ್ದಿಯಾಗಿದೆ. ಇದೀಗ ಈ ಸುದ್ದಿಯ ಬಗ್ಗೆ ಕನ್ನಡ ನಿರ್ದೇಶಕ ದಯಾಳ್ ಪದ್ಮನಾಧನ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ದಯಾಳ್ ನೂರು ಕೋಟಿ ಆಫರ್ ಬಗ್ಗೆ ಖುಷಿ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ವಿಕ್ರಾಂತ್ ರೋಣ ಓಟಿಟಿ ಬಿಡುಗಡೆಗೆ ನೂರು ಕೋಟಿ ಆಫರ್ ಸುದ್ದಿ ಕೇಳಿ ಶಾಕ್ ಆಗಿದೆ ಅದರ ಜೊತೆಗೆ ಖುಷಿಯೂ ಆಗಿದೆ” ಎಂದು ದಯಾಳ್ ಬರೆದುಕೊಂಡಿದ್ದಾರೆ.

“ಖುಷಿಯಾಗಲು ಕಾರಣ, ವಿಕ್ರಾಂತ್ ರೋಣ ಡೈರೆಕ್ಟ್ ಓಟಿಟಿ ಬಿಡುಗಡೆಗೆ ನನ್ನ ಒಳ್ಳೆಯ ಸ್ನೇಹಿತ ನಿರ್ಮಾಪಕ ಜಾಕ್ ಮಂಜು ಗೆ ಈ ದೊಡ್ಡ ಆಫರ್ ಬಂದಿರುವುದು. ಇದು ಖುಷಿಯ ವಿಚಾರ. ಆದರೆ ಓಟಿಟಿ ವ್ಯವಹಾರದ ಬಗ್ಗೆ, ಓಟಿಟಿಯಲ್ಲಿ ಕನ್ನಡ ಚಿತ್ರಗಳ ಬೇಡಿಕೆ ಬಗ್ಗೆ ಆಳವಾದ ಜ್ಞಾನವನ್ನು ನಾನು ಹೊಂದಿರುವ ಕಾರಣ ಈ ಆಫರ್ ಸುದ್ದಿ ಕೇಳಿ ಶಾಕ್ ಕೂಡ ಆಗಿದೆ” ಎಂದು ದಯಾಳ್ ಹೇಳಿದ್ದಾರೆ.

ಜಾಕ್ ಮಂಜು ಅವರು ಒಂದು ದೊಡ್ಡ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡರು ಎಂದು ವಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಹೇಳುತ್ತೇನೆ. ಥಿಯೇಟರ್ ನಲ್ಲೆ ಚಿತ್ರ ಬಿಡುಗಡೆ ಮಾಡಬೇಕು ಎಂಬ ಪ್ಯಾಷನ್ ಗಾಗಿ ವ್ಯಾವಹಾರಿಕ ಸುವರ್ಣಾವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ನನಗೆ ಅನಿಸುತ್ತದೆ. ಈ ದೊಡ್ಡ ಆಫರ್ ಅನ್ನು ಒಪ್ಪಿಕೊಂಡು ಓಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದರೇ, ಚಿತ್ರೋದ್ಯಮದಲ್ಲಿ ಎತ್ತರಕ್ಕೆ ಬೆಳೆಯಲು ಅವರಿಗೆ ಸಹಕಾರಿಯಾಗುತ್ತಿತ್ತು”

“ಇದರಿಂದ ಬರುವ ಲಾಭದಿಂದ ಜಾಕ್ ಮಂಜು ಅವರು ಇನ್ನೂ ಇಪ್ಪತ್ತು ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನ ಮಾಡಬಹುದಿತ್ತು. ಹಾಗೆಯೆ ಎರಡು ಅಥವಾ ಮೂರು ಸ್ಟಾರ್ ನಟರ ಸಿನಿಮಾಗಳನ್ನ ತಯಾರಿಸಬಹುದಿತ್ತು:” ಎಂದು ದಯಾಳ್ ಫೇಸ್ಬುಕ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top