fbpx
ಸಮಾಚಾರ

ಜಮೀರ್ ಪುತ್ರನ 2ನೇ ಚಿತ್ರಕ್ಕೆ ರಾಬರ್ಟ್ ನಿರ್ದೇಶಕ ಆಕ್ಷನ್ ಕಟ್?

ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ಈಗ ಹಳೆಯ ವಿಚಾರ,. ಝೈದ್ ಅವರು ನಟಿಸಿರುವ ಮೊದಲ ಚಿತ್ರ ‘ಬನಾರಸ್’ ಇನ್ನೂ ಬಿಡುಗಡೆಯೇ ಆಗಿಲ್ಲ ಅದಾಗಲೇ ಅವರ ಎರಡನೇ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ..

ಕನ್ನಡ ಸೇರಿದಂತೆ ಐದಾರು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಬನಾರಸ್’ ಚಿತ್ರದ ಮೇಲೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೆಕ್ಷೆಗಳು ಮೂಡಿರುವುದು ಸತ್ಯ. ಸಾಕಷ್ಟು ಸದಭಿರುಚಿ ಚಿತ್ರಗಳನ್ನ ನೀಡಿರುವ ಪ್ರತಿಭಾವಂತ ನಿರ್ದೇಶಕ ಜಯತೀರ್ಥ ನಿರ್ದೇಶನ ಮಾಡಿರುವುದರಿಂದ ಝೈದ್ ಮೊದಲ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಮನೆ ಮಾಡಿವೆ.

ಮೊದಲ ಚಿತ್ರದಲ್ಲಿ ಸ್ಟಾರ್ ನಿರ್ದೇಶಕನ ಚಿತ್ರದಲ್ಲಿ ನಟಿಸುತ್ತಿರುವ ಝೈದ್ ತನ್ನ ಎರಡನೇ ಚಿತ್ರದಲ್ಲೂ ಮತ್ತೊಬ್ಬ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಚೌಕ, ರಾಬರ್ಟ್ ಅಂತ ಹಿಟ್ ಚಿತ್ರಗಳನ್ನ ನೀಡಿರುವ ತರುಣ್ ಸುಧೀರ್ ನಿರ್ದೇಶನದಲ್ಲಿ ಝೈದ್ ಖಾನ್ ಅವರ 2ನೇ ಸಿನಿಮಾ ಶುರುವಾಗಲಿದೆಯಂತೆ. ಸದ್ಯ ಮೊದಲ ಹಂತದ ಮಾತುಕತೆ ಕೂಡ ಮುಗಿದಿದ್ದು ಬನಾರಸ್ ರಿಲೀಸ್ ಹೊತ್ತಿಗೆ ತರುಣ್ ಜೊತೆ 2ನೇ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top