fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ‘ರತ್ನನ್ ಪ್ರಪಂಚ’ ನಟಿ ರೆಬಾ

ಕಳೆದ ವರ್ಷ ಅಮೆಜಾನ್ ಪ್ರೈಮ್ ನಲ್ಲಿ ನೇರವಾಗಿ ಬಿಡುಗಡೆಯಾಗಿ ಎಲ್ಲರ ಮನಗೆದ್ದಿದ್ದ ಕನ್ನಡ ಚಿತ್ರ ‘ರತ್ನನ್ ಪ್ರಪಂಚ’. ದಾಳಿ ಧನಂಜಯ್ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ರೆಬಾ ಮೋನಿಕಾ ಜಾನ್ ನಾಯಕಿಯ ಪಾತ್ರದಲ್ಲಿ ನಟಿಸಿ ಸಿನಿರಸಿಕರ ಮನಗೆದ್ದಿದ್ದರು. ಇಂಥಾ ರೆಬಾ ಇದೀಗ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

 

 

ಹೌದು, ರೆಬಾ ಮೋನಿಕಾ ಜಾನ್ ಅವರು ತಮ್ಮ ಬಹುಕಾಲದ ಬಾಯ್ ಫ್ರೆಂಡ್ ಜೋಮನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರಿ 9ರಂದು ರೆಬಾ ಮತ್ತು ಜೋಮನ್ ಅವರ ವಿವಾಹ ಬೆಂಗಳೂರಿನ ಬ್ರಿಗೇಡ್​ ರಸ್ತೆಯ ಚರ್ಚ್​ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ನೆರವೇರಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಶೇರ್ ಮಾಡಿರುವ ನಟಿ, ಈ ಮೂಲಕ ಎಲ್ಲರೊಡನೆ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

‘’ಇಂದಿನಿಂದ ಒಳ್ಳೆಯದಾಗಲಿ, ಕೆಟ್ಟದಾಗಲಿ.. ಶ್ರೀಮಂತಿಕೆಯಲ್ಲಿ, ಬಡತನದಲ್ಲಿ.. ಆರೋಗ್ಯ ಮತ್ತು ಅನಾರೋಗ್ಯದಲ್ಲಿ.. ಯಾವಾಗಲೂ ಜೊತೆಗಿರಲು, ಪ್ರೀತಿಸಲು ವಾಗ್ದಾನ ಮಾಡಿದ್ದೇವೆ’’ ಎಂದು ಕಾಪ್ಷನ್ ಬರೆದಿರುವ ನಟಿ ರೆಬಾ ಮೋನಿಕಾ ಜಾನ್ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top