fbpx
ಸಮಾಚಾರ

ಅಚ್ಚರಿಯಾದರೂ ಸತ್ಯ: 10 ವರ್ಷದಲ್ಲಿ 800ಕ್ಕೂ ಮಕ್ಕಳಿಗೆ ತಂದೆಯಾದ ಹಾಲು ಮಾರಾಟಗಾರ: ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಯ್ತು ಬೆಚ್ಚಿ ಬೀಳುವಂತ ನಿಜಾಂಶ

ಆಧುನಿಕ ಪ್ರಪಂಚದಲ್ಲಿ ವಿಜ್ಞಾನ ಆವಿಷ್ಕಾರ ಎಂಬುದು ಯಾವ ರೀತಿ ಬೆಳದಿದೆ ಎಂದರೆ ಅದರಿಂದ ಕೆಲವೊಂದು ಅಚ್ಚರಿಯ ಪವಾಡಗಳು ನಡೆದುಬಿಡುತ್ತವೆ. ವೈಜ್ಞಾನಿಕ ಸಂಶೋಧನೆಗಳಿಂದ ಎಷ್ಟು ಅಡಗಿರುವ ಸತ್ಯಗಳನ್ನ ಬಯಲಿಗೆಳೆದ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇದೀಗ ಅಂಥದ್ದೇ ಮತ್ತೊಂದು ಅಚ್ಚರಿಯ ಸತ್ಯವೊಂದು ಡಿಎನ್ಎ ಎಂಬ ವೈಜ್ಞಾನಿಕ ಪರೀಕ್ಷೆಯಿಂದ ಬಯಲಾಗಿದೆ.

ದಕ್ಷಿಣ ಕ್ಯಾಲಿಪೋರ್ನಿಯಾದ ಹಾಲು ಮಾರಾಟಗಾರನೊಬ್ಬ ಬರೋಬ್ಬರಿ 800 ಮಕ್ಕಳ ತಂದೆ ಎನ್ನುವ ಶಾಕಿಂಗ್ ಸತ್ಯವೊಂದು ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಗಿದೆ. ಈ ಕುರಿತು ಅಮೇರಿಕಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ವ್ಯಕ್ತಿಯೊಬ್ಬ ಅಷ್ಟೊಂದು ಮಂದಿ ಮಕ್ಕಳಿಗೆ ತಂದೆಯಾಗಲು ಹೇಗೆ ಸಾಧ್ಯ ಎಂದು ನೀವು ಅಚ್ಚರಿ ವ್ಯಕ್ತಪಡಿಸಬಹುದು. ಅಚ್ಚರಿಗೊಂಡರೂ ಅದು ಸತ್ಯ.

1950ರ ದಶಕದಲ್ಲಿ ರಾಂಡಾಲ್​ ಎಂಬ ವ್ಯಕ್ತಿ ಮನೆಮನೆಗೆ ತೆರಳಿ ಹಾಲು ಸರಬರಾಜು ಮಾಡುತ್ತಿದ್ದನು. ಅಂದಿನ ಕಾಲದಲ್ಲಿ ಪ್ಯಾಕ್​ ಮಾಡಿದ ಹಾಲಿನ ಪ್ಯಾಕೆಟ್ ಗಳು ಇದ್ದಿಲ್ಲದ ಕಾರಣ ರಾಂಡಾಲ್​ ಮನೆಮನೆಗೆ ತೆರಳಿ ಹಾಲು ಮಾರುತ್ತಿದ್ದನು. ಈ ಸಂದರ್ಭದಲ್ಲಿ ಅಲ್ಲಿನ ಗೃಹಿಣಿಯರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ..

ಗಟ್ಟಿಮುಟ್ಟಾಗಿ ನೋಡಲು ಆಕರ್ಷಕವಾಗಿದ್ದ ರಾಂಡಾಲ್​ ತಾನು ಹಾಲು ಹಾಕುವ ಮನೆಯ ಮಹಿಳೆಯರನ್ನು ಒಲಿಸಿಕೊಳ್ಳುತ್ತಿದ್ದನು. ಸೈನಿಕರ ಪತ್ನಿಯರು ಸೇರಿದಂತೆ ಸಾಕಷ್ಟು ಮಹಿಳೆಯರ ಜೀವನದಲ್ಲಿ ರಾಂಡಾಲ್​ ಸಂಭಂದ ಬೆಳೆಸಿದ್ದನಂತೆ. ಅಂದಿನ ಕಾಲಘಟ್ಟದಲ್ಲಿ ಯಾವುದೇ ರೀತಿಯ ನೂತನ ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಇಲ್ಲದ ಕಾರಣ ಅಕ್ರಮ ಸಂಬಂಧಗಳು ಬೆಳಕಿಗೆ ತರಲು ಸಾಧ್ಯವಾಗಿರಲಿಲ್ಲ..

ಆದರೆ ಅಕ್ರಮ ಸಂಭಂದಗಳಿಂದ ಆ ಮಹಿಳೆಯರ ಕುಟುಂಬಗಳಲ್ಲಿ ಸಾಮಾನ್ಯವಾದ ಒಂದು ಸಮಸ್ಯೆಯನ್ನು ಹುಟ್ಟುಹಾಕಿತ್ತು. ಮಹಿಳೆಯರಿಗೆ ಜನಿಸಿದ ಮಕ್ಕಳು ಅವರ ಪತಿಯನ್ನು ಹೋಲುತ್ತಿರಲಿಲ್ಲ, ಬೇರೆ ರೀತಿಯ ಮೈಬಣ್ಣ, ವಿಭಿನ್ನ ರೀತಿಯ ಕೂದಲು ಹೊಂದಿರುತ್ತಿದ್ದರು. ಬಹು ವರ್ಷಗಳ ನಂತರ ಇದರಿಂದ ಆ ಪ್ರದೇಶದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಯಾಗಿತ್ತು.

ಮಕ್ಕಳ DNA ಟೆಸ್ಟ್​ನಲ್ಲಿ ಎಲ್ಲಾ ಮಕ್ಕಳು ಅವರ ತಂದೆಯ ರಕ್ತ ಸಂಬಂಧವನ್ನು ಹೊಂದಿಲ್ಲ ಎನ್ನುವ ಫಲಿತಾಂಶ ಡಿಎನ್ಎ ಪರೀಕ್ಷೆಯಿಂದ ಹೊರಬಿದ್ದಿತ್ತು. ಇದು ಆ ಭಾಗದದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಈ ಮದ್ಯೆ ವಿಜ್ಞಾನಿಗಳು ಹಾಲು ಮಾರಾಟಗಾರ ರಾಂಡಾಲ್​ ಅವರ ಡಿಎನ್​ಎ ಪರೀಕ್ಷೆ ಮಾಡಿದಾಗ ಯಾರೂ ಊಹಿಸಲು ಸಾಧ್ಯವಾಗದ ಸತ್ಯವೊಂದು ಹೊರಬಿದ್ದಿತ್ತು. ನೂರಾರು ಪರೀಕ್ಷೆಗಳ ನಂತರ 800ಕ್ಕೂ ಹೆಚ್ಚು ಮಕ್ಕಳ ಡಿಎನ್​ಎ ರಾಂಡಾಲ್​ ಡಿಎನ್​ಎಗೆ ಹೋಲಿಕೆ ಆಗುತ್ತಿತ್ತು. ಇದನ್ನು ನೋಡಿ ವಿಜ್ಞಾನಿಗಳೇ ಬೆಚ್ಚಿ ಬಿದ್ದಿದ್ದಾರೆ.

ಈ ವಿಚಾರವನ್ನು ವಿಜ್ಞಾನಿಗಳು ಸ್ವತಃ ರಾಂಡಾಲ್ ಅವರಿಗೂ ತಿಳಿಸಿದ್ದಾರೆ. ಸದ್ಯ 97 ವರ್ಷ ವಯಸ್ಸಿನ ವಯೋವ್ರುದ್ದರಾಗಿರುವ ರಾಂಡಲ್ ” ನನಗೆ ಹೆಂಡತಿ ಮಕ್ಕಳಿಲ್ಲದ ಕಾರಣ ನಾನು ಒಬ್ಬಂಟಿ ಎಂದು ಭಾವಿಸಿದ್ದೆ. ಈಗ ಎಂಥಾ ಆಶೀರ್ವಾದ ಸಿಕ್ಕಿದೆ. ನನಗೆ ಖುಷಿಯಾಗಿದೆ. ಆ ಎಲ್ಲ ಮಕ್ಕಳನ್ನು ಭೇಟಿಯಾಗಲು ಕಾಯುತ್ತಿದ್ದೇನೆ” ಎಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top