fbpx
ಸಮಾಚಾರ

ಕ್ಯಾಮೆರಾ ಮುಂದೆ ಟವೆಲ್​ ಕಿತ್ತೆಸೆದ ನಿವೇದಿತಾ ಗೌಡ;​ ನೆಟ್ಟಿಗರ ಕಿಡಿ

ಕನ್ನಡ ಬಿಗ್ ಬಾಸ್ ಸೀಸನ್ ಐದರ ಪ್ರಮುಖ ಆಕರ್ಷಣೆಯಾಗಿ ಮನೆ ಮಾತಮಾತಾಗಿದ್ದ ಮೈಸೂರಿನ ಬೆಡಗಿ ನಿವೇದಿತಾ ಗೌಡ ಎಲ್ಲರಿಗೂ ಗೊತ್ತಿರೋಹಾಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್.. ಅಸಲಿಗೆ ಡಬ್ ಸ್ಮಾಷ್ ಗಳ ಮೂಲಕ ವೈರಲ್ ಆಗಿಯೇ ಆಕೆ ಬಿಗ್ ಬಾಸ್ ವೇದಿಕೆಗೆ ಆಯ್ಕೆಯಾಗಿದ್ದು.. ಬಿಗ್ ಬಾಸ್ ನಲ್ಲೆ ಸಹ ಸ್ಪರ್ದಿಯಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಅವರನ್ನ ಮದುವೆಯಾಗಿದ್ದ ನಿವೇದಿತಾ ಇತ್ತೀಚಿಗೆ ಟಿವಿ ಶೋಗಳಿಂದ ದೂರ ಉಳಿದು ಸಂಸಾರ ತಾಪತ್ರಯಗಳಲ್ಲಿ ಮುಳುಗಿಹೋಗಿದ್ದಾರೆ. ಈ ಮದ್ಯೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊಗಳನ್ನ ಹಂಚಿಕೊಳ್ಳೋ ಮೂಲಕ ಅಭಿಮಾನಿಗಳ ಜೊತೆ ಟಚ್ಚಲಿದ್ದಾರೆ ನಿವೇದಿತಾ.

 

 

ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಸದಾ ಇನ್​ಸ್ಟಾಗ್ರಾಂ ರೀಲ್ಸ್ ಮಾಡಿ ಪೋಸ್ಟ್​ ಮಾಡುತ್ತಿರುತ್ತಾರೆ. ಇದೀಗ ಇವರ ಹೊಸ ರೀಲ್ಸ್​ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಸೆಲೆಬ್ರಿಟಿಯಾಗಿ ಈ ರೀತಿಯ ವಿಡಿಯೋಗಳನ್ನು ಮಾಡುವುದು ಎಷ್ಟು ಸರಿ ಎಂದು ಎಲ್ಲರು ಪ್ರಶ್ನೆ ಮಾಡುತ್ತಿದ್ದಾರೆ.

ನಿವೇದಿತಾ ತಮ್ಮ ಪತಿ ಚಂದನ್​ ಶೆಟ್ಟಿ ಅವರಿಗೆ ಪ್ರ್ಯಾಂಕ್​ ಮಾಡಿರುವ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ‘ನನ್ನ ಗಂಡನಿಗೆ ಪ್ರ್ಯಾಂಕ್​ ಮಾಡುತ್ತೇನೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋ ಆರಂಭ ಆಗುತ್ತದೆ. ಬಳಿಕ ತಮ್ಮ ಮೊಬೈಲ್​ ಕ್ಯಾಮೆರಾವನ್ನು ಆನ್​ ಮಾಡಿ ನಿವೇದಿತಾ​ ಟವಲ್ ಕಟ್ಟಿಕೊಂಡು ಬಂದು ಕ್ಯಾಮರಾ ಮುಂದೆ ಡ್ಯಾನ್ಸ್​ ಮಾಡಲು ಆರಂಭಿಸುತ್ತಾರೆ. ಆಗ ಚಂದನ್​ ಅಲ್ಲೆ ಪಕ್ಕದಲ್ಲಿ ಇರುವ ಸೋಫಾ ಮೇಲೆ ಕುಳಿತು ಲ್ಯಾಪ್​ ಟಾಪ್​ ನೋಡ್ತಾ ಇರ್ತಾರೆ.

ನಂತರ ತಾವು ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಿನಲ್ಲಿಯೇ ಕಿತ್ತು ಎಸೆಯುವಂತೆ ನಿವೇದಿತಾ ಗೌಡ ಅಭಿನಯಿಸುತ್ತಾರೆ. ಆಗ ಚಂದನ್​ ಲ್ಯಾಪ್​ ಟಾಪ್​ ಅನ್ನು ಪಕ್ಕದಲ್ಲಿ ಇಟ್ಟು ಕೂಡಲೇ ನಿವೇದಿತಾ ಅವರನ್ನು ಹಿಡಿಯಲು ಬರುತ್ತಾರೆ. ನಂತರ ನಿವೇದಿತಾ ತಮಗೆ ಪ್ರ್ಯಾಂಕ್​ ಮಾಡಿದ್ದಾರೆ ಎಂಬುದು ಚಂದನ್​ಗೆ ಗೊತ್ತಾಗಿ ಟವಲ್​ ಅನ್ನು ನಿವೇದಿತಾ ಮೇಲೆ ಎಸೆದಿದ್ದಾರೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಕಮೆಂಟ್​ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಬಾಲಿಶ ಪ್ರವೃತ್ತಿಯ ವಿದ್ಯೋವಾಗಿದೆ. ಇದು ಪ್ರ್ಯಾಂಕ್​ ಅಲ್ಲ, ನಾಟಕೀಯ ವಿಡಿಯೋ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top