fbpx
ಸಮಾಚಾರ

ಜೇಮ್ಸ್ ಚಿತ್ರದ ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ? ಪುನೀತ್ ಕೊನೆಯ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ನಿರ್ದೇಶಕ ಚೇತನ್!

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಎರಡೂವರೆ ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.

ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್. ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಚಿತ್ರಕ್ಕೆ ತಮ್ಮ ಭಾಗದ ಸಂಪೂರ್ಣ ಚಿತ್ರಗಳನ್ನು ಮುಗಿಸಿದ ಪುನೀತ್ ರಾಜಕುಮಾರ್ ಅವರು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ವಿಧಿ ಆಟವೇ ಬೇರೆಯಾಗಿ ಅವ್ರು ನಮ್ಮಿಂದ ದೂರ ವಾಗಿದ್ದಾರೆ.

ಪುನೀತ್ ಅವರ ಅನುಪಸ್ಥಿಯಲ್ಲಿಯೇ ಬಾಕಿ ಉಳಿದಿದ್ದ ದೃಶ್ಯಗಳ ಶೂಟಿಂಗ್ ಅನ್ನು ನಿರ್ದೇಶಕ ಚೇತನ್ ಮುಗಿಸಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಿದ್ದಾರೆ. ಸದ್ಯ ಅಪ್ಪು ನಮ್ಮ ಜೊತೆ ಇರದೇ ಇರುವ ಕಾರಣ ‘ಜೇಮ್ಸ್‌ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರ ಧ್ವನಿ ನೀಡಬಹುದು ಎಂಬ ಚರ್ಚೆ ಹೊರಗಡೆ ನಡೆಯುತ್ತಿದೆ. ಈ ಬಗ್ಗೆ ಇದೀಗ ಸ್ವತಃ ನಿರ್ದೇಶಕ ಚೇತನ್ ಅವರೇ ಮಾಹಿತಿ ನೀಡಿದ್ದಾರೆ.

“ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್‌ ಆಗಿರುವ ಪುನೀತ್ ಅವರ ಧ್ವನಿಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಶೂಟಿಂಗ್ ವೇಳೆ ಸುತ್ತಮುತ್ತಲಿನ ಶಬ್ದಗಳನ್ನು ನಿಯಂತ್ರಿಸಿ ಮಾಡಿ, ಪುನೀತ್ ಅವರ ಧ್ವನಿಯನ್ನೇ ಉಳಿಸಿಕೊಳ್ಳಲು ತಂತ್ರಜ್ಞಾನದಲ್ಲಿ ಆಗುತ್ತಾ ಎಂಬುದನ್ನು ನೋಡುತ್ತಿದ್ದೇವೆ’ ಎಂದು ಚೇತನ್​ ಹೇಳಿದ್ದಾರೆ.

‘ಒಂದು ವೇಳೆ ಇದು ಸಾಧ್ಯವಾಗದೇ ಹೋದಲ್ಲಿ ಶಿವಣ್ಣ ಡಬ್ಬಿಂಗ್‌ ಮಾಡಿಕೊಡುತ್ತೇನೆ ಎಂದಿದ್ದಾರೆ.. ಈ ಬಗ್ಗೆ ಒಂದು ಸ್ಪಷ್ಟನೆ ಸಿಗಲು ನಮಗೆ ಇನ್ನೂ ಹದಿನೈದು ದಿನಗಳಷ್ಟು ಸಮಯ ಬೇಕಾಗುತ್ತೆ.. ಈ ಸಿನಿಮಾವನ್ನು ಆದಷ್ಟು ಚೆನ್ನಾಗಿ ತೆರೆಯ ಮೇಲೆ ತರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ ನಿರ್ದೇಶಕ ಚೇತನ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top