ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ನಟನಾಗಿ ಉಳಿದಿಲ್ಲ. ಕೆಜಿಎಫ್ ಸಿನಿಮಾ ಬಂದ ನಂತರ ಅವರ ರೇಂಜ್ ಬದಲಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಯಶ್ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅವರ ಕೆಜಿಎಫ್ ಭಾಗ-೨ ಚಿತ್ರಕ್ಕೆ ಇಡೀ ಭಾರತವೇ ಎದುರುನೋಡುತ್ತಿದೆ.
ಕೆಜಿಎಫ್ ಸಿನಿಮಾ ಮೂಲಕ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಕುರಿತು ಬಾಲಿವುಡ್ ನಲ್ಲಿ ಒಂದು ರೀತಿಯ ಹವಾ ಸೃಷ್ಟಿಯಾಗಿದೆ. ಇದಕ್ಕೆ ಬಾಲಿವುಡ್ ಶೋ, ಹಿಂದಿ ಕುರುತೆರೆಗಳಲ್ಲಿ ಯಶ್ ಕುರಿತ ಮಾತುಕತೆ ಜೋರಾಗಿರುತ್ತೆ. ಇದಕ್ಕೆ ಪೂರಕವೆಂಬಂತೆ ಮತ್ತೊಂದು ಪ್ರಸಂಗ ನಡೆದಿದೆ. ಏನದು ಅಂತೀರಾ? ಮುಂದೆ ಓದಿ
ಬಾಲಿವುಡ್ ನಲ್ಲಿ ಸದ್ಯ ನಟ ರಣವೀರ್ ಸಿಂಗ್ ನಡೆಸಿಕೊಡ್ಡುತ್ತಿರುವ ಟಾಕ್ ಷೋ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದೆ. ಸಿನಿಮಾ ಸೆಲೆಬ್ರೆಟಿಗಳನ್ನ ಅತಿಥಿಯಾಗಿ ಕರೆದು ಚಿಟ್ ಚಾಟ್ ನಡೆಸುವ ಕಾರ್ಯಕ್ರಮ ಇದಾಗಿದೆ. ಈ ಶೋಗೆ ಈ ವಾರ ನಟಿ ಸೋನಾಕ್ಷಿ ಸಿನ್ಹಾ ಅತಿಥಿಯಾಗಿ ಬಂದಿದ್ದರು. ರೌಡಿ ಬೇಬಿ ಸೋನಾಕ್ಷಿ ಶೋನಲ್ಲಿ ಮೋಜು ಮಸ್ತಿ ಮಾಡಿ ಕೆಲವು ವಿಚಾರಗಳನ್ನ ಕೂಡ ರಣವೀರ್ ಜೊತೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನಿರೂಪಕ ರಣವೀರ್ ಸಿಂಗ್, ಯಶ್ ಚಿತ್ರವನ್ನು ತೋರಿಸಿ ಇವರು ಯಾರು ಗೊತ್ತಾ? ಅಂತಾ ಕೇಳುತ್ತಾರೆ. ಆಗ ಸೋನಾಕ್ಷಿ ‘ಹೌದು ಗೊತ್ತು. ಇವರು ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್, ನಟ ಯಶ್. ಇವರ ಸಿನಿಮಾ ಕೆಜಿಎಫ್ ತುಂಬಾ ದೊಡ್ಡ ಹಿಟ್ ಆಯ್ತು’ ಅಂತ ಹೇಳುತ್ತಾರೆ.
ಆಗ ರಣವೀರ್ ಪ್ರಶ್ನೆ ಅದಲ್ಲ, ಯಶ್ ಯಾವ ಇಂಡಸ್ಟ್ರಿಗೆ ಸಂಬಂಧಿಸಿದ್ದಾರೆ? ಎಂದು ಪ್ರಶ್ನೆ ಕೇಳುತ್ತಾರೆ. ಜೊತೆಗೆ ಸ್ಯಾಂಡಲ್ವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಎಂದು 4 ಆಯ್ಕೆಗಳನ್ನ ನೀಡುತ್ತಾರೆ. ಆಗ ಗೊಂದಲಗೊಂಡ ಸೋನಾಕ್ಷಿ, ಈ ವಿಚಾರ ನನಗೆ ಗೊತ್ತಿಲ್ಲ ಅಂತ ಹೇಳಿ, ಫೋನೋ ಫ್ರೆಂಡ್ ಆಯ್ಕೆ ತೆಗೆದುಕೊಂಡು ಸ್ನೇಹಿತರ ಸಹಾಯ ಪಡೆದು ಸ್ಯಾಂಡಲ್ವುಡ್ ಅಂತ ಹೇಳುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
