fbpx
ಸಮಾಚಾರ

ಅಮೃತ ಬಾಳಲ್ಲಿ ವಿಧಿಯಾಟ: ಮೊದಲ ಮಗುವನ್ನೂ ಕಳೆದುಕೊಂಡಿದ್ದರು ಅಮೃತಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಕೇಂದ್ರ ಬಿಂದುವಾಗಿ ಎಲ್ಲರ ಹೃದಯ ಗೆದ್ದಿದ್ದ ಹುಡುಗಿ ಸಮನ್ವಿ ನೆನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಸಮನ್ವಿ ದಾರುಣವಾಗಿ ಮರಣ ಹೊಂದಿದ್ದಾಳೆ.

ನಿನ್ನೆ ಸಮನ್ವಿ ಹಾಗೂ ಅವರ ತಾಯಿ ಅಮೃತಾ ನಾಯ್ಡು ಬೆಂಗಳೂರಿನಲ್ಲಿ ಶಾಪಿಂಗ್ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕೋಣನಕುಂಟೆ ಕ್ರಾಸ್ ಬಳಿ ಬಂದ ಟಿಪ್ಪರ್ ಲಾರಿಯೊಂದು ಬಲವಾಗಿ ಡಿಕ್ಕಿ ಹೊಡೆದಿದೆ. ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಸಮನ್ವಿ ದುರ್ಮರಣ ಹೊಂದಿದ್ದಾಳೆ. ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆಯೇ ಪುಟ್ಟ ಬಾಲಕಿ ಸಾವನ್ನಪ್ಪಿದ್ದಾಳೆ. ಆ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಗಾಯಾಳಯವಾಗಿರುವ ಅಮೃತಾ ನಾಯ್ಡು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು.

ಅಮೃತ ಬಾಳಲ್ಲಿ ವಿಧಿಯಾಟ:
ಈ ಹಿಂದೆ ಇವರ ಮೊದಲ ಮಗು ಕೂಡ ಎಷ್ಟೇ ಪ್ರಯತ್ನ ಪಟ್ಟರು ಬದುಕುಳಿದಿರಲಿಲ್ಲ. ಅಮೃತಾ ತಾವು ಹೆತ್ತ ಮಗುವನ್ನು ಉಳಿಸಿಕೊಳ್ಳಲು ಹರಸಾಹ ಪಟ್ಟಿದ್ದರು. ಹುಟ್ಟಿದಾಗ ಮಗುವಿಗೆ ಅರೋಗ್ಯ ಸಮಸ್ಯೆ ಕಾಡಿತ್ತು. ಆಸ್ಪತ್ರೆಯಲ್ಲಿ ಹಲವು ದಿನ ಚಿಕಿತ್ಸೆ ಕೊಡಿಸಿದರು ಮಗು ಉಳಿಯಲಿಲ್ಲ. ಆ ಮಗುವನ್ನು ಆಸ್ಪತ್ರೆ ಸಿಬ್ಬಂದಿ ಪೇಪರ್​ನಲ್ಲಿ ಸುತ್ತು ಕೊಟ್ಟಿದ್ದರಂತೆ. ಇದನ್ನು ಹೇಳಿಕೊಂಡು ಈ ಹಿಂದೆ ನನ್ನಮ್ಮ ಸೂಪರ್​ ಸ್ಟಾರ್​​ ವೇದಿಕೆಯಲ್ಲೇ ಅಮೃತಾ ಕಣ್ಣೀರು ಹಾಕಿದ್ದರು.

ಮೊದಲ ಮಗುವಿನ ಸಾವನ್ನ ಎರಡನೇ ಮಗುವಿನ ನಗುವಿನಲ್ಲಿ ನೋಡಿ ಮರೆಯುತ್ತಿದ್ದ ಅಮೃತ ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಅವರು ಸದ್ಯ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಮೂರನೇ ಮಗು ಭೂಮಿಗೆ ಬರುವ ಮುನ್ನವೇ ಅಮೃತ ಬಾಳಲ್ಲಿ ಮತ್ತೊಮ್ಮೆ ವಿಧಿಯಾಟವಾಡಿದ್ದು ಈಗ ತಮ್ಮ ಎರಡನೇ ಮಗಳನ್ನೂ ಕೂಡ ಕಳೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top