ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಎರಡೂವರೆ ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.
ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್. ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಚಿತ್ರಕ್ಕೆ ತಮ್ಮ ಭಾಗದ ಸಂಪೂರ್ಣ ಚಿತ್ರಗಳನ್ನು ಮುಗಿಸಿದ ಪುನೀತ್ ರಾಜಕುಮಾರ್ ಅವರು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ವಿಧಿ ಆಟವೇ ಬೇರೆಯಾಗಿ ಅವ್ರು ನಮ್ಮಿಂದ ದೂರ ವಾಗಿದ್ದಾರೆ. ಪುನೀತ್ ಅವರ ಅನುಪಸ್ಥಿಯಲ್ಲಿಯೇ ಬಾಕಿ ಉಳಿದಿದ್ದ ದೃಶ್ಯಗಳ ಶೂಟಿಂಗ್ ಅನ್ನು ನಿರ್ದೇಶಕ ಚೇತನ್ ಮುಗಿಸಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಿದ್ದಾರೆ.
ಈ ಮದ್ಯೆ ಇದೆ ಜನವರಿ 26 ರಂದು ಪುನೀತ್ ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಲು ತೀರ್ಮಾನಿಸಿದೆ. ಇದೇ ತಿಂಗಳ 26 ನೇ ತಾರೀಖು ‘ಜೇಮ್ಸ್’ ಸಿನಿಮಾದ ಒಂದು ಪವರ್ ಪುಲ್ ಪೋಸ್ಟರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ಚಿತ್ರ ನಿರ್ದೇಶಕ ಚೇತನ್ ಅವರೇ ಸ್ಪಷ್ಟನೆ ನೀಡಿದ್ದಾರೆ. “ನಾವು ಸಂಕ್ರಾಂತಿಗೆ ಪೋಸ್ಟರ್ ಬಿಡುಗಡೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದೆವು, ಆದರೆ ಕೊರೋನಾ ಮೂರನೇ ಅಲೆಯ ಕಾರಣ ಪೋಸ್ಟರ್ ರಿಲೀಸ್ ಅನ್ನು ಗಣರಾಜ್ಯೋತ್ಸವಕ್ಕೆ ಮುಂದೂಡಿದ್ದೇವೆ” ಎಂದು ಚೇತನ್ ಹೇಳಿದ್ದಾರೆ.
ಅಂದಹಾಗೆ ಎಲ್ಲಾ ಅಂದುಕೊಂಡತೆ ಆದರೆ ಇದೇ ವರ್ಷ ಅಪ್ಪು ಅವರ ಹುಟ್ಟ ಹಬ್ಬವಾದ ಮಾರ್ಚ್- 17 ನೇ ತಾರೀಖು ಜೇಮ್ಸ್ ಚಿತ್ರ ರಿಲೀಸ್ ಮಾಡಲು ಕೂಡ ಸಿದ್ಧರಾಗಿದ್ದಾರೆ. ಒಂದು ವೇಳೆ ಕೊರೊನಾ ಹೆಚ್ಚಾದರೆ ‘ಜೇಮ್ಸ್’ ರಿಲೀಸ್ ಮುಂದೆ ಹೋಗುತ್ತದೆ ಎಂದು ಮೂಲಗಳು ತಿಳಿಸಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
