fbpx
ಸಮಾಚಾರ

ಕ್ರೂರ ವಿಧಿಯಾಟಕ್ಕೆ ಪುಟ್ಟ ಕಂದಮ್ಮ ಬಲಿ: ಅಷ್ಟಕ್ಕೂ ಅಪಘಾತ ನಡೆದದ್ದು ಹೇಗೆ?

ಕನ್ನಡದ ಖಾಸಗಿ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿಶೋ ವೀಕ್ಷಕರ ಮೆಚ್ಚುಗೆ ಗಳಿಸಿತ್ತು. ಈ ಕಾರ್ಯಕ್ರಮದಲ್ಲಿ 6 ವರ್ಷದ ಪುಟ್ಟ ಕಂದಮ್ಮ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಶೋನಲ್ಲಿ ಕೇಂದ್ರ ಬಿಂದುವಾಗಿ ಎಲ್ಲರ ಹೃದಯ ಗೆದ್ದಿದ್ದ ಈ ಹುಡುಗಿ ನೆನ್ನೆ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಸಮನ್ವಿ ದಾರುಣವಾಗಿ ಮರಣ ಹೊಂದಿದ್ದಾಳೆ.

ಸಮನ್ವಿ, ತಾಯಿ ಅಮೃತ ನಾಯ್ಡು ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ಕೋಣನ ಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆ ತೆರಳುತ್ತಿದ್ದಾಗ ದ್ವಿಚಕ್ರ ವಾಹನ ಮತ್ತು ಟಿಪ್ಪರ್ ಲಾರಿ ನಡುವೆ ಅಪಘಾತವಾಗಿ ಸಮನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಗಾಯಾಳಯವಾಗಿರುವ ಅಮೃತಾ ನಾಯ್ಡು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು.

ನಿನ್ನೆ ಸಮನ್ವಿ ಹಾಗೂ ಅವರ ತಾಯಿ ಅಮೃತಾ ನಾಯ್ಡು ಬೆಂಗಳೂರಿನಲ್ಲಿ ಶಾಪಿಂಗ್ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕೋಣನಕುಂಟೆ ಕ್ರಾಸ್ ಬಳಿ ಬಂದ ಟಿಪ್ಪರ್ ಲಾರಿಯೊಂದು ಬಲವಾಗಿ ಡಿಕ್ಕಿ ಹೊಡೆದಿದೆ. ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಸಮನ್ವಿ ದುರ್ಮರಣ ಹೊಂದಿದ್ದಾಳೆ. ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆಯೇ ಪುಟ್ಟ ಬಾಲಕಿ ಸಾವನ್ನಪ್ಪಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top