fbpx
ಸಮಾಚಾರ

ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ಆರೋಪ: ‘ಹೂ ಅಂಟವಾ’ ವಿವಾದದ ಬಗ್ಗೆ ಸಂಗೀತ ನಿರ್ದೇಶಕ DSP ಕೊನೆಗೂ ಪ್ರತಿಕ್ರಿಯೆ

ಇತ್ತೀಚಿಗಷ್ಟೇ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ ತೆಲುಗಿನ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಹಾಗೆಯೇ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಹಾಡುಗಳನ್ನು ಕಂಪೋಸ್ ಮಾಡಿದ್ದರು. ಪ್ರೇಕ್ಷಕರನ್ನು ಥಿಯೇಟರ್ ನತ್ತ ಸೆಳೆಯಲು ದೇವಿ ಶ್ರೀ ಪ್ರಸಾದ್ ಅವರು ಕಂಪೋಸ್ ಮಾಡಿದ್ದ ಹಾಡುಗಳು ಸಹ ಒಂದು ಕಾರಣ ಎಂದು ಸಿನಿಮಾ ಮಂದಿ ಅಭಿಪ್ರಾಯಪಟ್ಟಿದ್ದರು.

‘ಪುಷ್ಪ’ ಸಿನಿಮಾದ ಪ್ರಚಾರಕ್ಕಾಗಿ ಮುಂಬೈಗೆ ತೆರಳಿದ್ದ ದೇವಿಶ್ರೀ ಪ್ರಸಾದ್​ ಆ ವೇಳೆ ಸಿನಿಮಾಗಳ ಐಟಂ ಹಾಡುಗಳ ಕುರಿತು ಮಾತನಾಡಿದರು. ‘ಜನರ ಪಾಲಿಗೆ ಅವು ಐಟಂ ಸಾಂಗ್​ ಆಗಿರಬಹುದು. ಆದರೆ ನನಗೆ ಅವು ಭಕ್ತಿಗೀತೆಗಳಿದ್ದಂತೆ. ಅದೇ ರಾಗದಲ್ಲಿ ದೇವರ ಹಾಡುಗಳನ್ನು ಹೇಳಬಹುದು. ಅದೊಂದು ಧ್ಯಾನ’ ಎಂದು ಅವರು ಹೇಳಿಕೆ ನೀಡಿದ್ದರು. ಆ ವೇದಿಕೆಯಲ್ಲಿ ‘ಉ ಅಂಟಾವಾ ಮಾವ ಉಊ ಅಂಟಾವಾ ಮಾವ..’ ಹಾಡಿನ ಸಾಹಿತ್ಯಕ್ಕೆ ಬದಲಾಗಿ ಅವರು ದೇವರ ಕುರಿತಾದ ಸಾಲುಗಳನ್ನು ಹಾಡಿದ್ದರು. ಅದನ್ನು ಕೇಳಿ ಅಲ್ಲಿದ್ದ ಅನೇಕರು ನಕ್ಕು ಎಂಜಾಯ್​ ಮಾಡಿದ್ದರು. ಆದರೆ ಹಿಂದೂಗಳು ದೇವಿಶ್ರೀ ಪ್ರದಾದ್​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು.

ಇನ್ನು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೇವಿ ಶ್ರೀ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೋಶಮಹಲ್ ಶಾಸಕ ರಾಜಾ ಸಿಂಗ್​ ಹೈದರಾಬಾದ್‌ನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ದೇವಿಶ್ರೀ, ಐಟಂ ಸಾಂಗ್​ಗೆ ಭಕ್ತಿ ಗೀತೆಯನ್ನು ಹೇಗೆ ಹೋಲಿಸುತ್ತಾರೆ? ಅನಗತ್ಯವಾಗಿ ಹಿಂದೂ ಭಕ್ತಿ ಗೀತೆಗಳ ವಿರುದ್ಧ ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕೂಡಲೇ ಬೇಷರತ್​ ಕ್ಷಮೆಯಾಚಿಸಬೇಕೆಂದಿದ್ದರು. ಸದ್ಯ ಈ ವಿವಾದದ ಬಗ್ಗೆ ಸ್ವತಃ ದೇವಿಶ್ರೀ ಪ್ರಸಾದ ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಪ್ರೇಕ್ಷಕರು ಒಂದು ಸಾಂಗ್ ಅನ್ನು ಯಾವುದೇ ರೀತಿ ನೋಡಿದರೂ ಅದು ಸರಿಯೇ. ಲವ್ ಸಾಂಗ್ ಆಗಿದ್ದರೆ ಲವ್ ಸಾಂಗ್, ಐಟಂ ಸಾಂಗ್ ಆಗಿದ್ದರೆ ಐಟಂ ಸಾಂಗ್ ಆಗುತ್ತೆ. ನನಗೆ, ಅದು ಭಕ್ತಿ, ಪ್ರೀತಿ ಅಥವಾ ಐಟಂ ಹಾಡು ಆಗಿರಲಿ. ಸಂಯೋಜನೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಇದನ್ನು ಈ (ರಾಜಕೀಯ) ವ್ಯಕ್ತಿಗಳು ಬೇರೆ ಸನ್ನಿವೇಶದಲ್ಲಿ ತೆಗೆದುಕೊಂಡಿದ್ದಾರೆ ಅದು ಅನಗತ್ಯವಾಗಿತ್ತು” ಎಂದು ದೇವಿ ಶ್ರೀ ಪ್ರಸಾದ್ ತಿಳಿಸಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top