fbpx
ಸಮಾಚಾರ

ವೈರಲ್ ಆಯ್ತು ಡಾ.ವಿಷ್ಣು ವೀರಪ್ಪ ನಾಯ್ಕ ಪುತ್ಥಳಿ

ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ನಮ್ಮಿಂದ ದೈಹಿಕವಾಗಿ ದೂರವಾಗಿ ಸುಮಾರು 12 ವರ್ಷಗಳಿಂದ ಹೆಚ್ಚು ಸಮಯವೇ ಕಳೆದುಹೋಗಿದೆ. ದಾದಾ ನಮ್ಮ ಜೊತೆ ಇಲ್ಲದಿದ್ದರೂ ಅವರ ಮೇಲಿನ ಅಭಿಮಾನ ಕನ್ನಡಿಗರಲ್ಲಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲೆಲ್ಲಾ ವಿಷ್ಣುವರ್ಧನ್ ಅವರನ್ನು ಮೆರೆಸುತ್ತಾರೆ ಅವರ ಅಪ್ಪಟ ಅಭಿಮಾನಿಗಳು.

ನೆಚ್ಚಿನ ನಟನ ಕುರುಹುಗಳನ್ನ ಜೀವಂತವಾಗಿರುವ ನಿಟ್ಟಿನಲ್ಲಿ ವಿಷ್ಣು ಅಭಿಮಾನಿಗಳು ಈವರೆಗೆ ಸಾವಿರಾರು ಪುತ್ಥಳಿಗಳನ್ನ ರಾಜ್ಯಾದ್ಯಂತ ಪ್ರತಿಷ್ಠಾಪಿಸಿದ್ದಾರೆ. ಸೂರ್ಯವಂಶದ ಸತ್ಯಮೂರ್ತಿ ಶೈಲಿಯದ್ದೂ ಸೇರಿದಂತೆ ಇನ್ನೂ ಅನೇಕ ವಿಷ್ಣು ಪುತ್ಥಳಿಗಳು ರಾಜ್ಯಾದ್ಯಂತ ಕಾಣಲು ಸಿಗುತ್ತವೆ. ಈಗ ಆ ಪುತ್ಥಳಿಗಳ ಸಾಲಿಗೆ ಹೊಸದೊಂದು ವಿಷ್ಣು ಚಿತ್ರದ ಜನಪ್ರಿಯ ಪಾತ್ರವೊಂದರ ಪುತ್ಥಳಿ ವಿನ್ಯಾಸ ಸೇರ್ಪಡೆಯಾಗುತ್ತಿದೆ.

ಹೌದು, ಡಾ.ವಿಷ್ಣುವರ್ಧನ್ ನಟಿಸಿದ ವೀರಪ್ಪನಾಯಕ ಸಿನಿಮಾದ ವೀರಪ್ಪ ನಾಯಕನ ಪಾತ್ರ ಎಲ್ಲರ ಮನಗೆದ್ದಿತ್ತು. ದೇಶಪ್ರೇಮವನ್ನು ಸಾರುವ ಕಥಾಹಂದರ ಹೊಂದಿರುವ ಈ ಚಿತ್ರ ವಿಷ್ಣು ಅವರ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ಸದ್ಯ ಇದೇ ವೀರಪ್ಪನಾಯಕ ಶೈಲಿಯ ಪುತ್ಥಳಿಯನ್ನು ವಿಷ್ಣು ಅಭಿಮಾನಿಗಳು ವಿನ್ಯಾಸ ಮಾಡಿಸಿದ್ದಾರೆ.

ವರ್ಣಸಿಂಧು ಎಂಬ ಶಿಲ್ಪಿ ಈ ಪುತ್ಥಳಿಯನ್ನು ಕೆತ್ತಿದ್ದಾರೆ. ವಿಷ್ಣುಸೇನಾ ಸಮಿತಿ ಪುತ್ಥಳಿ ನಿರ್ಮಾಣಕ್ಕೆ ಬೇಕಾದ ಹಣಕಾಸು ನೆರವನ್ನು ಒದಗಿಸಿದೆ. ಈ ಪುತ್ಥಳಿಯು ತುಮಕೂರಿನ ಶಿರಾ ತಾಲೂಕಿನ ಬ್ರಹ್ಮಸಂದ್ರದಲ್ಲಿ ಜನವರಿ 19ರಂದು ಬೆಳಿಗ್ಗೆ 11 ಗಂಟೆಗೆ ಅನಾವರಣಗೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top