fbpx
ಸಮಾಚಾರ

ಬೆಳಗಾವಿಯಲ್ಲಿ ಮತ್ತೆ ಕನ್ನಡಕ್ಕೆ ಅವಮಾನ: ಕನ್ನಡ ಬೋರ್ಡ್ ಗಳಿಗೆ ಮಸಿ ಬಳಿದ ರಣಹೇಡಿಗಳು

ಇತ್ತೀಚಿಗಷ್ಟೇ ಕನ್ನಡ ಬಾವುಟ ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಹೊಡೆದುಹಾಕಿದ್ದ ನಾಡದ್ರೋಹಿ ಪುಡಾರಿಗಳು ಈಗ ಮತ್ತೆ ಕನ್ನಡ ಬೋರ್ಡ್ಗಳಿಗೆ ಮಸಿ ಬಳಿಯುವ ಮೂಲಕ ಕನ್ನಡಿಗರ ಭಾವನೆಗೆ ದಕ್ಕೆ ತಂದಿದ್ದಾರೆ. ಕುಂದಾ ನಗರಿ ಬೆಳಗಾವಿಯಲ್ಲಿ ಈ ಘಟನೆ ನಡೆದಿದ್ದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ರಸ್ತೆ ಮಾರ್ಗದಲ್ಲಿ ಇರುವ ರಸ್ತೆಸಂಚಾರ ಜಾಗೃತಿ ಮೂಡಿಸುವ ಫಲಕಕ್ಕೆ ಕಿಡಿಗೇಡಿಗಳು ಕಪ್ಪುಮಸಿ ಬರೆದಿದ್ದಾರೆ. ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ಈ ನಾಮಫಲಕಕ್ಕೆ ಕಿಡಿಗೇಡಿಗಳು ಮಸಿ ಬಳಿಯುವ ಮೂಲಕ ಬೆಳಗಾವಿಯಲ್ಲಿ ಮತ್ತೆ ಅಶಾಂತಿಗೆ ಕಾರಣರಾಗಿದ್ದಾರೆ.

ಯಾವಾಗ ಮಸಿ ಎರಚಲಾಗಿದೆ ಎಂಬ ಮಾಹಿತಿ ಇಲ್ಲ. ಆದರೆ, ಈ ಕುರಿತಾತ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್ ಆಗಿವೆ. ಪದೇ ಪದೇ ಕನ್ನಡಿಗರ ಭಾವನೆಗಳಿಗೆ ಅಪಮಾನ ಮಾಡುತ್ತಿರುವ ನಾಡದ್ರೋಹಿ ಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top