fbpx
ಸಮಾಚಾರ

ರಾಧಿಕಾ ಪಂಡಿತ್​ ಮೊಬೈಲ್​ನಲ್ಲಿ ಯಶ್​ ಹೆಸರು ಏನೆಂದು ಸೇವ್​ ಆಗಿದೆ? ಪತಿಗೆ ತಾನು ಇಟ್ಟಿರೋ ನಿಕ್ ನೇಮ್ ಅನ್ನು ರಿವೀಲ್ ಮಾಡಿದ ರಾಧಿಕಾ

ಕನ್ನಡ ಚಿತ್ರರಂಗದ ಮುದ್ದು ಜೋಡಿಗಳಲ್ಲಿ ಒಂದಾಗಿರುವ ಯಶ್ ರಾಧಿಕಾ ದಂಪತಿ ಕೂಡ ಒಂದು. ಲವ್ ಕಮ್ ಅರೇಂಜ್ ಮ್ಯಾರೇಜ್ ಮಾಡಿಕೊಂಡ ಈ ಸ್ಟಾರ್ ಜೋಡಿ ಸದ್ಯ ಇಬ್ಬರು ಮಕ್ಕಳನ್ನ ಹೊಂದಿ ಸಂಸಾರ ಜೀವನದಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಇದೀಗ ತಾವು ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ಯಶ್‍ಗೆ ತಾನು ಇಟ್ಟ ಹೆಸರನ್ನು ನಟಿ ರಾಧಿಕಾ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.

 

 

View this post on Instagram

 

A post shared by Ayra Yash ♥️ (@ay_ra_official)

 

ಮೊದಮೊದಲು ತಮ್ಮ ಲವ್ ವಿಷಯವನ್ನು ಯಶ್-ರಾಧಿಕಾ ರಹಸ್ಯವಾಗಿ ಇಟ್ಟಿದ್ದರು. ತೀರಾ ಆಪ್ತರು ಎನಿಸಿಕೊಂಡವರಿಗೆ ಮಾತ್ರ ಈ ವಿಚಾರದ ಬಗ್ಗೆ ತಿಳಿದಿತ್ತು. ನಿಶ್ಚಿತಾರ್ಥ ಮಾಡಿಕೊಂಡ ಬಳಿಕವೇ​ಈ ವಿಷ್ಯ ಅಧಿಕೃತವಾಗಿತ್ತು. ಪ್ರೀತಿ ವಿಚಾರವನ್ನು ಗುಟ್ಟಾಗಿಡುವ ಸಲುವಾಗಿ ಯಶ್​ ಅವರ ಮೊಬೈಲ್ ನಂಬರ್​ ನು ಕೂಡ ರಾಧಿಕಾ ಅವರು ನಿಕ್​ನೇಮ್ ವೊಂದರ​ ಮೂಲಕ ಸೇವ್​ ಮಾಡಿಕೊಂಡಿದ್ದರು. ರಾಧಿಕಾ ಫೋನ್ ನಲ್ಲಿ ಈಗಲೂ ಯಶ್ ಅವರ ನಂಬರ್ ಅದೇ ಹೆಸರಿನಿಂದ ಸೇವ್ ಆಗಿದೆಯಂತೆ. ಹೀಗಂತ ಸ್ವತಃ ರಾಧಿಕಾ ಪಂಡಿತ್​ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

‘ಯಶ್​ ನಂಬರ್​ ನನ್ನ ಮೊಬೈಲ್​ನಲ್ಲಿ ಇದ್ದಾಗಿನಿಂದಲೂ ನಾನು ಹೆಸರನ್ನು ಚೇಂಜ್​ ಮಾಡೇ ಇಲ್ಲ. ಡೇಟಿಂಗ್ ಮಾಡುವ ಟೈಮ್​ನಲ್ಲಿ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಒಂದು ಹೆಸರಿಟ್ಟಿದ್ದೆ. ‘ಡೊಲ್ಲ’ ಎಂದು ಯಶ್​ ಹೆಸರನ್ನು ಸೇವ್​ ಮಾಡಿಕೊಂಡಿದ್ದೆ. ನನ್ನ ಮಾತೃಭಾಷೆ ಕೊಂಕಣಿಯಲ್ಲಿ ಡೊಲ್ಲಾ ಎಂದರೆ ಫ್ಯಾಟ್​ ಎಂದರ್ಥ’ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top