fbpx
ಸಮಾಚಾರ

”ಶಾಕಿಂಗ್‌”, ಕೊಹ್ಲಿ ಟೆಸ್ಟ್‌ ಕ್ಯಾಪ್ಟನ್ಸಿ ಬಿಟ್ಟ ಬಗ್ಗೆ ರೋಹಿತ್‌ ಶರ್ಮ ಪ್ರತಿಕ್ರಿಯೆ!

ಟೆಸ್ಟ್ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ನಿನ್ನೆ ಸಂಜೆ ದಿಡೀರನೆ ತಮ್ಮ ನಾಯಕತ್ವದಿಂದ ಕೆಳಗಿಳಿದರು. ಕಳೆದ ವರ್ಷ ಏಕದಿನ ಮತ್ತು ಟಿ-20 ಸ್ವರೂಪದ ಕ್ರಿಕೆಟ್ ಮಾದರಿಯ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸಲಾಗಿತ್ತು. ಈಗ ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿ ಬಿಸಿಸಿಐಗೆ ಶಾಕ್ ನೀಡಿದ್ದಾರೆ ಕಿಂಗ್ ಕೊಹ್ಲಿ.

ಟೆಸ್ಟ್‌ನಲ್ಲಿ ಭಾರತೀಯ ಕ್ರಿಕೆಟ್‌ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್‌ ಆಗಿರುವ ಕೊಹ್ಲಿ ತೆಗೆದುಕೊಮಡ ಅಚ್ಚರಿಯ ನಿರ್ಧಾರದ ಬಗ್ಗೆ ಉಪನಾಯಕ ರೋಹಿತ್‌ ಶರ್ಮಾ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ನಿರ್ಧಾರದ ಬಗ್ಗೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿದ ರೋಹಿತ್‌, “ಆಶ್ಚರ್ಯವಾಗಿದೆ!! ಆದರೆ, ವಿರಾಟ್‌ ಕೊಹ್ಲಿ ಟೆಸ್ಟ್‌ ನಾಯಕತ್ವದಲ್ಲಿನ ಯಶಸ್ವಿ ಪಯಣಕ್ಕೆ ಶುಭಾಶಯಗಳು,” ಎಂದು ರೋಹಿತ್‌ ಶರ್ಮಾ ತಮ್ಮ ಸೋಷಿಯಲ್‌ ಮೀಡಿಯಾ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.

 

 

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ಇತ್ತ ಭಾರತಕ್ಕೆ ಮುಂದಿನ ನಾಯಕ ಯಾರು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ರವಿ ಅಶ್ವಿನ್ ಹೀಗೆ ಹಲವು ಹಸೆರುಗಳು ಕೇಳಿ ಬರುತ್ತಿದೆ. ಈಗಾಗಲೇ ಏಕದಿನ ಮತ್ತು ಟ್ವೆಂಟಿ-20 ಟೀಮ್ ಇಂಡಿಯಾ ನಾಯಕರಾಗಿರುವ ರೋಹಿತ್ ಶರ್ಮಾ ಅವರೇ ತಂಡದ ನಾಯಕ ಸ್ಥಾನಕ್ಕೆ ಸೂಕ್ತ ಆಯ್ಕೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಇನ್ನೂ ಕೆಲವರು ವರ್ಕ್ಲೋಡ್ ಮ್ಯಾನೇಜ್ಮೆಂಟ್ ಅನ್ನೋ ಗಮನದಲ್ಲಿಟ್ಟುಕೊಂಡು ಕೆಎಲ್ ರಾಹುಲ್ ಅವರನ್ನು ಟೆಸ್ಟ್ ತಂಡಕ್ಕೆ ನಾಯಕನನ್ನಾಗಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾಗೆ ನಾಯಕ ಯಾರಾಗ್ತಾರೆ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top