fbpx
ಸಮಾಚಾರ

ಕಾವೇರಿ ನದಿಯಲ್ಲಿ ಸಮನ್ವಿ ಅಸ್ತಿ ವಿಸರ್ಜನೆ ಮಾಡಿದ ಕುಟುಂಬ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಕೇಂದ್ರ ಬಿಂದುವಾಗಿ ಎಲ್ಲರ ಹೃದಯ ಗೆದ್ದಿದ್ದ ಹುಡುಗಿ ಸಮನ್ವಿ ಮೊನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಸಮನ್ವಿ ದಾರುಣವಾಗಿ ಮರಣ ಹೊಂದಿದ್ದಳು.

ಶುಕ್ರವಾರ (ಜನವರಿ 14) ಸಮನ್ವಿ ಅಂತ್ಯಕ್ರಿಯೆ ನೆರವೇರಿತ್ತು. ಇಂದು (ಜನವರಿ 16) ಸಮನ್ವಿ ಅಸ್ತಿಯನ್ನು ಕಾವೇರಿಯಲ್ಲಿ ವಿಸರ್ಜನೆ ಮಾಡಲಾಗಿದೆ. ಸಮನ್ವಿ ಅಸ್ತಿಯನ್ನು ಅವಳ ತಂದೆ ರೂಪೇಶ್​ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಅಸ್ತಿ ವಿಸರ್ಜನೆ ಮಾಡಿದ್ದಾರೆ. ಖ್ಯಾತ ವೈದಿಕ ಬಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಈ ಕಾರ್ಯ ನಡೆದಿದೆ.

ಖ್ಯಾತ ವೈದಿಕ ಬಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಸಮನ್ವಿ ತಂದೆ ರೂಪೇಶ್​ ನಾಯ್ಡು ಅವರು ಅಸ್ತಿ ವಿಸರ್ಜನಾ ಕಾರ್ಯ ನೆರವೇರಿಸಿದರು. ತಿಲ ತರ್ಪಣ, ನಾರಾಯಣ ಬಲಿ, ಪಿಂಡ ಪ್ರದಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅಂತಿಮ ವಿಧಿ ವಿಧಾನ ಕಾರ್ಯದಲ್ಲಿ ಸಮನ್ವಿ ತಾತ ನಾರಾಯಣ ಸ್ವಾಮಿ ಹಾಗೂ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಭಾಗಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top