ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಎರಡೂವರೆ ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.
It’s all about yesterday scenerio across Karnataka State#Yuvarathnaa #PuneethRajkumar @PuneethRajkumar @SanthoshAnand15 @hombalefilms pic.twitter.com/7tRo0Jno0q
— Appu (@PlzComeBackAppu) January 16, 2022
ಅಪ್ಪು ಅವರು ಬದುಕಿದ್ದಾಗ ತೆರೆಕಂಡ ಕೊನೆಯ ಸಿನಿಮಾ ಅಂದರೆ ಅದು ‘ಯುವರತ್ನ’ ಸಿನಿಮಾ. ಕೋವಿಡ್ ಕಾರಣದಿಂದ ಚಿತ್ರಮಂದಿರದಲ್ಲಿ ಅಷ್ಟೇನೂ ಹಿಟ್ ಆಗದ ಸಿನಿಮಾ ಓಟಿಟಿಯಲ್ಲಿ ಹೊದ್ದ ಯಶಸ್ಸು ಕಂಡಿತ್ತು. ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೊದಲ ಬಾರಿಗೆ ಉದಯ ಟಿವಿಯಲ್ಲಿ ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರವಾಯಿತು. ಈ ಸಿನಿಮಾವನ್ನು ಜನರು ಬರಮಾಡಿಕೊಂಡ ರೀತಿ ನೋಡಿದರೆ ಎಂಥವರಿಗೂ ಕಣ್ಣಂಚಲ್ಲಿ ನೀರು ಬರುತ್ತೆ.
#Yuvarathnaa Craze Level
Fan Girls……#KingAppu #PuneethRajkumar pic.twitter.com/YFXNWn4d9s
— ಪವರ್ ಸ್ಟಾರ್™ / ᵀʰᵉ ᵀʳᵃᵈᵉᴹᵃʳᵏ (@AppuBossFan) January 15, 2022
‘ಯುವರತ್ನ’ ಸಿನಿಮಾ ಪ್ರಸಾರವಾಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ಟಿವಿ ಪರದೆಗೆ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ಕೆಲವರು ಆರತಿ ಬೆಳಗಿದ್ದಾರೆ. ಅನೇಕರು ಇದೇ ರೀತಿ ‘ಯುವರತ್ನ’ನನ್ನು ಸ್ವಾಗತಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಮಂದಿ ಮಿಸ್ ಯೂ ಅಪ್ಪು ಎಂದು ಕಾಮೆಂಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
