fbpx
ಸಮಾಚಾರ

ಕೇವಲ 10ನೇ ವಯಸ್ಸಿಗೆ ಮಿಲಿಯನೇರ್, 2 ಸಂಸ್ಥೆಗಳ ಒಡತಿಯಾದ ಪುಟ್ಟ ಹುಡುಗಿಯ ಒಟ್ಟು ಆಸ್ತಿ ಕೇಳಿದ್ರೆ ದಂಗಾಗೋದು ಗ್ಯಾರಂಟಿ

ನಾವೆಲ್ಲರೂ ಸಣ್ಣೋರಿದ್ದಾಗ ಒಂದು ಮಿಠಾಯಿ ಖರೀದಿಸೋಕು ಅಪ್ಪ ಅಮ್ಮನ ಬಳಿ ಕೈಚಾಚ್ತಿದ್ದ ದಿನಗಳು ನೆನಪಿರಬಹುದು. ಇವತ್ತಿನ ಪೀಳಿಗೆಯ ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಏನೇ ಬೇಕಾದರೂ ಅಪ್ಪ ಅಮ್ಮನ ಬಳಿ ಗೋಳಿಟ್ಟು, ಕಾಡಿಸಿ ಪೀಡಿಸಿ ತಮಗೆ ಬೇಕಾಗಿದ್ದನ್ನು ತೆಗೆದುಕೊಳ್ಳುವ ಈ ಕಾಲಘಟ್ಟದಲ್ಲಿ ಇಲ್ಲೋರ್ವ ಪುಟ್ಟ ಬಾಲೆ ತಾನೇ ದುಡಿದ ಹಣದಲ್ಲಿ ಬೆಂಜ್ ಖರೀದಿಸಿದ್ದಾಳೆ. ಅದಷ್ಟೇ ಅಲ್ಲದೆ ಆಕೆ ಈಗ ಮಿಲಿಯೆನೇರ್. ಇವೆಲ್ಲಾ ಹಾಗಿರಲಿ. ಆಕೆಯ ವಯಸ್ಸು ಕೇಳಿದ್ರೆ ಒಮ್ಮೆ ದಂಗಾಗೋದು ಗ್ಯಾರಂಟಿ. ಈಕೆ ಕೇವಲ ೧೦ರ ಪುಟಾಣಿ ಪೋರಿ! ಈಕೆಯ ಹೆಸರಿನಲ್ಲಿರೋದು ಬರೋಬ್ಬರಿ ೨ ಬೃಹತ್ ಕಂಪನಿಗಳು.

ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲ! ತಾನೇ ದುಡಿದಿದ್ದು?
ಎಲ್ಲೋ ಅಪ್ಪನೋ, ತಾತನೋ, ಮುತ್ತಾತನೋ ದುಡಿದ ಸಂಪತ್ತಿಗೆ ಈಕೆ ಒಡತಿಯಾಗಿದ್ದಾಳೆ ಅನ್ನುವ ಅನುಮಾನ ಈಗ ನಿಮ್ಮೆಲ್ಲರ ತಲೆಯೊಳಗೆ ಬಂದು ಬಿಟ್ಟಿರುತ್ತೆ. ಆದರೆ ಇದ್ಯಾವುದೂ ಆಕೆಯ ಪಿತ್ರಾರ್ಜಿತ ಆಸ್ತಿಯಿಂದ ಬಂದ ಸಂಪತ್ತಲ್ಲ. ತನ್ನ ಸ್ವಂತ ಪರಿಶ್ರಮದಿಂದ ಗಳಿಸಿದ ಆಸ್ತಿ. ಅಂದ್ಹಾಗೆ ಆಕೆಯ ಬ್ಯಸಿನೆಸ್ ಏನು? ಆಕೆಗೆ ಇಷ್ಟೆಲ್ಲಾ ಹಣ ಹೇಗೆ ಸಂಪಾದನೆ ಆಯಿತು? ಯಾರು ಕೊಟ್ರು? ಎಷ್ಟು ಬಂಡವಾಳ ಹಾಕಿದ್ಳು? ಇತ್ಯಾದಿ ಪ್ರಶ್ನೆಗಳು ಸಹಜವಾಗಿ ನಮಗೆ ಕಾಡಿಯೇ ಕಾಡುತ್ತದೆ. ಹಾಗಾದರೆ ಯಾರು ಈ ಬಾಲೆ? ಎಲ್ಲಿಯವಳು? ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಯಾರೀ ಶ್ರೀಮಂತ ಬಾಲೆ?
ಅಂದ್ಹಾಗೆ ಈ ಹುಡುಗಿಯ ಹೆಸರು “ಪಿಕ್ಸಿ ಕರ್ಟಿಸ್”. ಮುದ್ದು ಮುದ್ದಾಗಿ ಎಲ್ಲರ ಜೊತೆ ನಗುನಗುತ್ತಾ ಮಾತನಾಡುತ್ತಾ ಓಡಾಡಿಕೊಂಡಿರುವ ಈ ಪುಟ್ಟ ಬಾಲೆ ಮಿಲಿಯೆನೇರ್ ಬ್ಯುಸಿನೆಸ್ ಮ್ಯಾನ್ ಎಂದು ಎಂಥವರಿಗೂ ನೋಡಿದ ತಕ್ಷಣಕ್ಕೆ ಅನ್ನಿಸದು. ಮೂಲತಃ ಆಸ್ಟೆçÃಲಿಯಾದವಳಾಗಿರುವ ಈ ಪಿಕ್ಸಿ ಕರ್ಟಿಸ್ ಕೇವಲ ಹತ್ತೇ ವರ್ಷಕ್ಕೆ ಮಿಲಿಯೆನೇರ್ ಆಗಿ ವಿಶ್ವದ ಕಣ್ಣು ಕುಕ್ಕಿದ್ದಾಳೆ. ಎಲ್ಲಾ ತಂದೆ ತಾಯಂದಿರೂ ಮಕ್ಕಳೆಂದರೆ ಹೀಗಿರಬೇಕು ಎಂದು ಹೇಳುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ ಪಿಕ್ಸಿ.

ಕಂಪನಿ ಶುರುಮಾಡಿದಾಗ ಈಕೆಗೆ ಕೇವಲ ೨ ವರ್ಷ
ಪಿಕ್ಸಿ ತನ್ನ ಮೊತ್ತ ಮೊದಲ ಕಂಪೆನಿ ಶುರು ಮಾಡಿದಾಗ ಆಕೆಗೆ ಕೇವಲ ೨ ವರ್ಷ ವಯಸ್ಸು. ತನ್ನ ತಾಯಿ ರಾಕ್ಸಿ ಜಸೆಂಕಾ ಜೊತೆಗೂಡಿ ಆಟಿಕೆಗಳ ಕಂಪನಿ ಕಟ್ಟಿದ ಪಿಕ್ಸಿ ಈಗ ಎರಡು ಕಂಪೆನಿಗಳಿಗೆ ಒಡತಿ. ಬಾಲಕಿಯ ಮಾಲಕತ್ವದಲ್ಲಿರುವ ಪಿಕ್ಸಿಸ್ ಬೌಸ್ ಮತ್ತು ಪಿಕ್ಸಿಸ್ ಫಿಡ್ಜೆಟ್ ಎಂಬ ಎರಡು ಕಂಪನಿಗಳೂ ಇಂದು ಆಸ್ಟೆçÃಲಿಯಾದ ಮಾರುಕಟ್ಟೆಯಲ್ಲಿ ಅತ್ಯಧಿಕ ಲಾಭ ಗಳಿಸುವ ಕಂಪನಿಗಳು.

ಫಿಕ್ಸಿಯ ಆಟಿಕೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಫಿಕ್ಸಿಯ ಕಂಪನಿಯಲ್ಲಿ ತಯಾರಾಗುವ ಆಟಿಕೆಗಳಿಗೆ ಅದೆಷ್ಟು ಡಿಮ್ಯಾಂಡ್ ಇದೆಯೆಂದರೆ ಮಾರುಕಟ್ಟೆಗೆ ಬಂದ ಕೇವಲ ೪೮ ಗಂಟೆಗಳಲ್ಲಿ ಇವೆಲ್ಲವೂ ಸೋಲ್ಡೌಟ್ ಆಗುತ್ತದೆಯಂತೆ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ಈಕೆ ಕೋಟಿ ಕೋಟಿ ದುಡಿದಿದ್ದಾಳೆ. ಒಟ್ಟಾರೆ ಈ ಹತ್ತರ ಪೋರಿಯ ಸಂಪಾದನೆಯ ಎತ್ತರ ಇಲ್ಲಿಯವರೆಗೆ ಸುಮಾರು ೯೬ ಕೋಟಿಗೂ ಮಿಕ್ಕಿದೆಯಂತೆ. ಅಲ್ಲಿಯ ಕರೆನ್ಸಿಯನ್ವಯ ಇದು ೧೩ ಮಿಲಿಯನ್ ಡಾಲರ್ ಗಳು!

ಎಲ್ಲಾ ವಹಿವಾಟು ನೋಡಿಕೊಳ್ಳುವ ಬಾಲಕಿ
ಇವತ್ತಿನ ದಿನದಲ್ಲಿ ವಹಿವಾಟು, ವ್ಯವಹಾರಗಳನ್ನು ಪ್ರಾರಂಭಿಸುವುದು ಸುಲಭವಲ್ಲ ಎಂದೆನಿಸಿದ್ದರೂ ಅವೆಲ್ಲಾ ಸವಾಲುಗಳನ್ನು ಮೀರಿ ನಿಂತಿದ್ದಾಳೆ ಈ ಬಾಲಕಿ. ತಾನೇ ಎಲ್ಲಾ ವಹಿವಾಟು ನೋಡಿಕೊಳ್ಳುವ ಪಿಕ್ಸಿ ತನಗಾಗಿ ಒಂದು ಮರ್ಸಿಡಸ್ ಬೆಂಜ್ ಕಾರನ್ನೂ ಖರೀದಿಸಿದ್ದಾಳೆ. ಜೊತೆಗೆ ತನ್ನ ಕುಟುಂಬಕ್ಕಾಗಿ ಒಂದು ಸ್ವಂತ ಮನೆಯನ್ನೂ ಖರೀದಿಸಿದ್ದಾಳೆ. ಆಸ್ಟೆçÃಲಿಯಾದ ಸಿಡ್ನಿಯ ವಾಕ್ಲಾಸ್‌ನಲ್ಲಿರುವ ಈ ಬೊಂಬಾಟ್ ಮನೆಯ ಮೌಲ್ಯ ಬರೋಬ್ಬರಿ ೪೦ ಕೋಟಿ.

ನೆಟ್ಟಿಗರ ಗಮನ ಸೆಳೆದ ಪುಟಾಣಿ ಸೆಲೆಬ್ರೆಟಿ
ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಈಕೆಯ ಅನೇಕ ಫಾಲೋವರ್ಸ್ಗಳಿದ್ದಾರೆ. ಆಸ್ಟೆçÃಲಿಯಾದ ಟಾಪ್ ಸೆಲೆಬ್ರೆಟಿಗಳಲ್ಲಿ ಒಬ್ಬರಾಗಿರುವ ಫಿಕ್ಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ನಂತರ ಆಕೆಯ ಫಾಲೋವರ್ಸ್ ಬೆಳೆದಂತೆ ಆಕೆಯ ವ್ಯವಹಾರವೂ ಬೆಳೆಯುತ್ತಾ ಹೋಗಿದೆ. ಸಾಮಾಜಿಕ ಜಾಲತಾಣ ಬಳಸಿ ಈ ಪುಟ್ಟ ಬ್ಯುಸಿನೆಸ್ ಮ್ಯಾನ್ ವ್ಯವಹಾರ ಕ್ರಾಂತಿ ಮಾಡಿದ್ದಾಳೆ.

೧೫ನೇ ವಯಸ್ಸಿಗೆ ನಿವೃತ್ತಿ ಬೇಕಂತಾಳೆ ಫಿಕ್ಸಿ
ಇನ್ನು ಕೇವಲ ಹತ್ತು ವರ್ಷದವಳಾಗಿರುವ ಫಿಕ್ಸಿ ತನ್ನ ಸಾಧನೆಯಿಂದ ಇಂದು ಸಾಕಷ್ಟು ಹಣ, ಹೆಸರು ಗಳಿಸಿಕೊಂಡಿದ್ದಾಳೆ. ತನ್ನ ತಾಯಿಯ ನೆರವಿನಿಂದ ಉದ್ಯಮ ಕಟ್ಟಿದ್ದರೂ ತನ್ನ ಪ್ರಾಡಕ್ಟ್ಗಳನ್ನು ತಾನೇ ಮಾರ್ಕೆಟಿಂಗ್ ಮಾಡುತ್ತಾಳೆ ಫಿಕ್ಸಿ. ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ಫಿಕ್ಸಿ ಅದರಲ್ಲಿ ತನ್ನ ಆಟಿಕೆಯ ಬಗ್ಗೆ ಪರಿಚಯ ಮತ್ತು ಪ್ರಮೋಷನ್ ಮಾಡುತ್ತಾಳೆ. ಒಂದು ಕನಸೇ ಎನ್ನುವಂತೆ ಬೆಳೆದು ನಿಂತಿರುವ ಫಿಕ್ಸಿ ೧೫ನೇ ವಯಸ್ಸಿನಲ್ಲಿ ಎಲ್ಲದರಿಂದಲೂ ರಿಟೈರ್ ಪಡೆದುಕೊಂಡು ತನ್ನ ಕುಟುಂಬದೊAದಿಗೆ ನೆಲೆಸಲು ನಿರ್ಧರಿಸಿದ್ದಾಳೆ.
ಅನೇಕರು ಇಂದು ಪ್ರಗತಿಯಲ್ಲಿರುವ ತಮ್ಮ ಪಿತ್ರಾರ್ಜಿತ ಉದ್ಯಮಗಳನ್ನು ನಡೆಸುವುದರಲ್ಲಿ ವಿಫಲವಾಗುತ್ತಿರುವಾಗ, ಈ ಪುಟ್ಟ ಹುಡುಗಿ ತನ್ನದೇ ಉದ್ಯಮದಿಂದ ಎಲ್ಲರ ಮನೆಮಾತಾಗಿರುವುದು ನಿಜಕ್ಕೂ ಗ್ರೇಟ್ ಅಲ್ವಾ. ಬಾಲಕಿಯ ಈ ಸಾಧನೆಗೆ ನಮ್ಮದೊಂದು ಸಲಾಂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top