fbpx
ಸಮಾಚಾರ

“ನಾನೀಗ 4 ತಿಂಗಳ ಗರ್ಭಿಣಿ, ಸಮನ್ವಿಯೇ ಮತ್ತೆ ನನ್ನ ಮಗಳಾಗಿ ಬರಬೇಕು” ಅಮೃತ ನಾಯ್ಡು ಭಾವುಕ ಪೋಸ್ಟ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಕೇಂದ್ರ ಬಿಂದುವಾಗಿ ಎಲ್ಲರ ಹೃದಯ ಗೆದ್ದಿದ್ದ ಹುಡುಗಿ ಸಮನ್ವಿ ಮೊನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಸಮನ್ವಿ ದಾರುಣವಾಗಿ ಮರಣ ಹೊಂದಿದ್ದಳು.

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಮನ್ವಿ ತಾಯಿ ಅಮೃತಾ ನಾಯ್ಡು ಮುದ್ದು ಕಂದನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಮಗಳ ಕಳೆದುಕೊಂಡ ನೋವಿನಲ್ಲಿರುವ ಅಮೃತ ಜನರ ಬಳಿ ಮನವಿಯೊಂದನ್ನು ಮಾಡಿದ್ದಾರೆ. ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದುಕೊಳ್ಳುವ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

 

 

ಅಮೃತ ಮಾಡಿಕೊಂಡ ಮನವಿ ಏನು?
ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಪ್ರಾರ್ಥನೆ ನಾನು ಈಗ ನಾಲ್ಕು ತಿಂಗಳ ಗರ್ಭಿಣಿ ಮತ್ತು ನನ್ನ ಮುದ್ದು ಕಂದಮ್ಮ ಸಮನ್ವಯ ಬರುವಿಕೆಗಾಗಿ ತಾಯಿ ಜೀವ ಹಂಬಲಿಸುತ್ತಿದೆ.

ದಯಮಾಡಿ ನನಗೊಂದು ಸಹಾಯ ಮಾಡಿ, ಆ ಭಗವಂತನಲ್ಲಿ ನನಗೋಸ್ಕರ ಪ್ರಾರ್ಥಿಸಿ. ನಿಮ್ಮ ಎಲ್ಲರ ಪ್ರಾರ್ಥನೆಯ ಒತ್ತಾಯದಿಂದ ಆದರೂ ನನ್ನ ಮುದ್ದು ಕಂದಮ್ಮನನ್ನು ಭಗವಂತ ಮರಳಿ ಕಳಿಸಿ ಬಿಡಲಿ. ಅವಳನ್ನು ನನ್ನ ಗರ್ಭದಲ್ಲಿ ಜೋಪಾನಮಾಡಿ ಕಾಪಾಡಿ ಕೊಳ್ಳುತ್ತೇನೆ. ದಯಮಾಡಿ ಕೈಜೋಡಿಸಿ ನನ್ನ ಸಮನ್ವಿ ಮತ್ತೆ ಬರುವಿಕೆಗೆ ಸಹಾಯ ಮಾಡಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ಆಗಲೇ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ದಯವಿಟ್ಟು ನನಗಾಗಿ ಪ್ರಾರ್ಥಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top