fbpx
ಸಮಾಚಾರ

ಸಂಸ್ಕೃತ ವಿವಿ ವಿರೋಧಿಸಿ ಬೃಹತ್ ಅಭಿಯಾನ: #ಸಂಸ್ಕೃತವಿವಿಬೇಡ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್

ಸಂಸ್ಕೃತ ವಿವಿ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕೊಟ್ಟಿದ್ದ ಟ್ವಿಟ್ಟರ್ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕ ಹಿನ್ನಲೆಯಲ್ಲಿ ಇದೀಗ ಟ್ವಿಟ್ಟರ್ ಅಭಿಯಾನ ಯಶಸ್ವಿಯಾಗಿದೆ. ಜನವರಿ ೧೫ರಂದು ಕನ್ನಡ ಪರ ಸಂಘಟನೆಗಳು ಈ ಟ್ವಿಟರ್ ಅಭಿಯಾನಕ್ಕೆ ಕರೆ ಕೊಡಲಾಗಿತ್ತು.
ದೇಶದಲ್ಲಿ ಸಂಸ್ಕೃತ ವಿಶ್ವ ವಿದ್ಯಾನಿಲಯ ಬೇಡ ಎನ್ನುವ ನಿಟ್ಟಿನಲ್ಲಿ ನಡೆದ ಟ್ವಿಟ್ಟರ್ ಹೋರಾಟದಲ್ಲಿ ಅನೇಕ ಕನ್ನಡ ಪರ ಸಂಘಟನೆಗಳು ಭಾಗವಹಿಸಿ ಈ ಆಂದೋಲನವನ್ನು ಯಶಸ್ವಿಯಾಗಿಸಿದವು. ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಕಟ್ಟುವುದು ಬೇಡ ಎನ್ನುವುದು ಕನ್ನಡ ಪರ ಸಂಗಟನೆಗಳ ಆಗ್ರಹ.

ಇನ್ನು ಈ ಕರೆಯ ಹಿನ್ನಲೆಯಲ್ಲಿ ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ #ಸಂಸ್ಕೃತವಿವಿಬೇಡ, ಹ್ಯಾಷ್ ಟ್ಯಾಗ್‌ಗಳು ಸಾಕಷ್ಟು ಟ್ರೆಂಡಿAಗ್‌ನಲ್ಲಿದ್ದವು. ಅನೇಕ ಕನ್ನಡ ಪರ ಸಂಘಟನೆಗಳು ಈ ಹ್ಯಾಷ್ ಟ್ಯಾಗ್ ಬಳಸಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದವು.

ಕನ್ನಡವನ್ನು ಪಠ್ಯವಾಗಿ ಕಲಿಸಬಾರದೆನ್ನುವ ಹುನ್ನಾರ ಇದರಲ್ಲಿ ಎದ್ದು ಕಾಣುತ್ತಿದೆ. ಈಗಾಗಲೇ ಕೆಲವು ಸಂಸ್ಕೃತ ಸಂಘಟನೆಗಳು ಮತ್ತು ಉಪನ್ಯಾಸಕರುಗಳು ಪದವಿ ಹಂತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಕನ್ನಡವನ್ನು ಮುಗಿಸುವ ಹುನ್ನಾರ ಇವರದ್ದು. ನಾವು ಆ ಸಂಚನ್ನು ವಿಫಲಗೊಳಿಸೋಣ ಎಂದರು.

ಇದೊಂದು ದೊಡ್ಡ ಸಂಚು. ಸಂಸ್ಕೃತ ಉಪನ್ಯಾಸಕರಿಗೆ ಕನ್ನಡ ನಾಡು ನುಡಿಯ ಮೇಲೆ ಯಾಕಿಷ್ಟು ದ್ವೇಷ? ಅವರೇಕೆ ನಮ್ಮ ನಾಡು ನುಡಿಯನ್ನು ಮಕ್ಕಳಿಗೆ ಹೇಳಿಕೊಡದಂತೆ ಪಟ್ಟು ಹಿಡಿದಿದ್ದಾರೆ? ಇದರ ಹಿಂದೆ ವ್ಯಾಪಕ ಸಂಚು ನಡೆದಿದೆ ಎಂದು ಕನ್ನಡಿಗರು ಟ್ವೀಟ್ ಮಾಡಿದ್ದಾರೆ.

ಇನ್ನು ಅನೇಕ ಕನ್ನಡ ಪರ ಸಂಘಟನೆಗಳು ಈ ಅಭಿಯಾನವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು ಕನ್ನಡ ನಾಡು ನುಡಿಯ ಬಗ್ಗೆ ಗೌರವ ಇಲ್ಲದ ಸರ್ಕಾರವೇ ಇವರೆಲ್ಲರ ಹಿಂದೆ ನಿಂತಿದೆ. ಒಂದು ಕಡೆ ಹೊಸ ಶಿಕ್ಷಣ ನೀತಿಯ ಜಾರಿ ಮಾಡುವ ನಾಟಕ ಮಾಡುವ ಸರ್ಕಾರ ಮತ್ತೊಂದೆಡೆ ತಾವೇ ಹೇಳಿ ಕೋರ್ಟಿಗೆ ಅರ್ಜಿ ಹಾಕಿಸಿ ಜನರೆದುರು ತನ್ನ ನಿಜ ಬಣ್ಣ ಮರೆ ಮಾಚಿಕೊಂಡಿದೆ. ಅದರ ಬದಲು ಸರ್ಕಾರ ಕನ್ನಡ ವಿರೋಧಿ ಎಂದು ಧೈರ್ಯವಾಗಿ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾಮನಗರದಲ್ಲಿ ಸಂಸ್ಕೃತ ವಿವಿ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿದ್ದು ಅದನ್ನು ಆದಷ್ಟು ಬೇಗ ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇದರ ಪರಿಣಾಮವನ್ನು ಬಿಜೆಪಿ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಟ್ವೀಟಿಗರು ಎಚ್ಚರಿಕೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top