fbpx
ಸಮಾಚಾರ

ಅಪಘಾತದಲ್ಲಿ ಗಾಯಗೊಂಡ ದಿವ್ಯಾ ಸುರೇಶ್! ಅಸಲಿಗೆ ಈ ಆ್ಯಕ್ಸಿಡೆಂಟ್ ಆಗಿದ್ದು ಹೇಗೆ?

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಷೋ ಖ್ಯಾತಿಯ ನಟಿ ದಿವ್ಯಾ ಸುರೇಶ್ ಸದ್ಯ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ನಟಿ ದಿವ್ಯಾ ಸುರೇಶ್ ವಾಹನ ಅಪಘಾತಕ್ಕೆ ತುತ್ತಾಗಿದೆ. ಸೋಮವಾರ (ಜನವರಿ 17) ಅಪಘಾತವಾಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೈ ಕಾಲು ಮುಖಕ್ಕೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಿವ್ಯಾ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ದಿವ್ಯಾ ಅವರ ಮುಖದ ಮೇಲೆ ಗಾಯಗಳಾಗಿದ್ದು, ಚೇತರಿಸಿಕೊಳ್ಳಲು ಕೆಲವೊಂದಿಷ್ಟು ದಿನಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?
ನಟಿ ದಿವ್ಯಾ ಸುರೇಶ್ ಅವರು ಎರಡನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡು, ಹುಚ್ಚಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ 4-5 ನಾಯಿಗಳು ಜಗಳವಾಡುತ್ತ ದಿವ್ಯಾ ಚಲಾಯಿಸುತ್ತಿದ್ದ ಸ್ಕೂಟರ್‌ನತ್ತಲೇ ಸಾಗಿವೆ. ಈ ವೇಳೆ ಗಾಬರಿಗೊಂಡ ದಿವ್ಯಾ ಸ್ಕೂಟರ್‌ ಅನ್ನು ನಿಯಂತ್ರಿಸಲಾಗದೆ ಸ್ಕಿಡ್ ಆಗಿ ಬಿದ್ದಿದ್ದು, ದಿವ್ಯಾ ಅವರ ಮುಖ ಮತ್ತು ಕೈಗೆ ಪೆಟ್ಟಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top