fbpx
ಸಮಾಚಾರ

ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಆರೋಪಿ ಬಂಧನ

2020 ರಲ್ಲಿ ನಟಿ ವಿಜಯಲಕ್ಷ್ಮಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪನನ್‌ಗಟ್ಟು ಪದೈ ಕಟ್ಚಿ ಪಕ್ಷದ ಸ್ಥಾಪಕ ಹರಿ ನಾಡಾರ್‌ ಎಂಬಾತನನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಬಂಧಿಸಿದ್ದಾರೆ. ವಿಜಯಲಕ್ಷ್ಮಿಗೆ ಕಿರುಕುಳ ಮತ್ತು ಬೆದರಿಕೆ ಆರೋಪದ ಮೇಲೆ ಹರಿ ನಾಡಾರ್ ಅವರನ್ನು ಬಂಧಿಸಲಾಗಿದೆ.

2020ರ ಜುಲೈನಲ್ಲಿ ನಾಮ್‌ ತಮಿಳರ್‌ ಕಟ್ಚಿ (ಎನ್‌ಟಿಕೆ) ಪಕ್ಷದ ನಾಯಕ ಸೀಮನ್‌ ಕುಮ್ಮಕ್ಕಿನ ಮೇಲೆ ನಾಡಾರ್‌ ಕಿರುಕುಳ ನೀಡಿದ್ದಾನೆ ಎಂದು ನಟಿ ವಿಜಯಲಕ್ಷ್ಮಿ ಆರೋಪಿಸಿದ್ದರು. ತಿರುವನ್‌ಮಿಯೂರ್‌ ಪೊಲೀಸರಿಗೆ ದೂರನ್ನ ನೀಡಿದ್ದರು. ಅಷ್ಟೇ ಅಲ್ಲದೆ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಲೈಂಗಿಕ ಕಿರುಕುಳವೇ ಕಾರಣ ಎನ್ನಲಾಗಿತ್ತು.

ಈ ಪ್ರಕರಣ ತನಿಖೆ ನಡೆಸುತ್ತಿದ್ದ ತಿರುವನ್‌ಮಿಯೂರ್‌ ಪೊಲೀಸರಿಗೆ ನಟಿ,”ತನಗೆ ಕಿರುಕುಳ ನೀಡಲು ಹರಿ ನದರ್‌ನನ್ನು ಈ ಹಿಂದೆ ತನ್ನೊಂದಿಗೆ ಸಂಬಂಧ ಹೊಂದಿದ್ದ ಎನ್‌ಟಿಕೆ ಮುಖಂಡ ಸೀಮನ್‌ ಕಳಿಸಿದ್ದಾನೆ” ಎಂದು ಪೊಲೀಸರಿಗೆ ತಿಳಿಸಿದ್ದರು. ಇದೀಗ ಪ್ರಕರಣ ಸಂಬಂಧ ಆರೋಪಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top