fbpx
ಸಮಾಚಾರ

ಮುದ್ದಿನ ಮಗಳ ಲಾಸ್ಟ್ ಕಿಸ್: ಸಮನ್ವಿಯ ಕೊನೆ ವಿಡಿಯೋ ಹಂಚಿಕೊಂಡ ನಟಿ ಅಮೃತಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಕೇಂದ್ರ ಬಿಂದುವಾಗಿ ಎಲ್ಲರ ಹೃದಯ ಗೆದ್ದಿದ್ದ ಹುಡುಗಿ ಸಮನ್ವಿ ಮೊನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಸಮನ್ವಿ ದಾರುಣವಾಗಿ ಮರಣ ಹೊಂದಿದ್ದಳು.

 

 

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಮನ್ವಿ ತಾಯಿ ಅಮೃತಾ ನಾಯ್ಡು ಮುದ್ದು ಕಂದನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಮಗಳ ಅಗಲಿಕೆಯ ನೋವಿನಲ್ಲಿರುವ ಅಮೃತಾ ನಾಯ್ಡು ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

 

 

ಹೌದು. ಮಗಳ ಜೊತೆಗಿನ ಲಾಸ್ಟ್ ವೀಡಿಯೋವನ್ನು ಅಮೃತಾ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ನನಗೆ ಅವಳ ಲಾಸ್ಟ್ ಕಿಸ್ ಇದಾಗಿದ್ದು, ನನ್ನನ್ನು ನಾನು ಲವ್ ಮಾಡಿಕೊಳ್ಳುತ್ತೀನಿ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಮೂರು ಉಂಗುರಗಳನ್ನು ಹಿಡಿದುಕೊಂಡು ಇಂಗ್ಲಿಷನ್‌ನಲ್ಲಿ ಮಾತನಾಡಿರುವ ಸಮನ್ವಿಯ ವಿಡಿಯೋವನ್ನು ತಾಯಿ ಅಮೃತಾ ನಾಯ್ಡು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top