fbpx
ಸಮಾಚಾರ

ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿ ಬೃಹತ್ ನೇಮಕಾತಿ: ಬರೋಬ್ಬರಿ 1419 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹೊಸದಾದ ನೋಟಿಫಿಕೇಶನ್ ಪ್ರಕಟವಾಗಿದೆ. . ಒಟ್ಟು 1419 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ನೇಮಕಾತಿಗೆ ಸಂಬಂಧಪಟ್ಟ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

ಒಟ್ಟು 1419 ಹುದ್ದೆಗಳ ಮಾಹಿತಿ:
ಮೀನುಗಾರಿಕೆ ಸಹಾಯಕ ನಿರ್ದೇಶಕರು – 188 ಹುದ್ದೆಗಳು
ಪ್ರಥಮ ದರ್ಜೆ ಸಹಾಯಕರು – 95 ಹುದ್ದೆಗಳು
ಶೀಘ್ರಲಿಪಿಗಾರ – 11 ಹುದ್ದೆಗಳು
ದ್ವಿತೀಯ ದರ್ಜೆ ಸಹಾಯಕರು – 93 ಹುದ್ದೆಗಳು

ಡೇಟಾ ಎಂಟ್ರಿ ಅಸಿಸ್ಟೆಂಟ್ – 48 ಹುದ್ದೆಗಳು
ಚಾಲಕರು – 41 ಹುದ್ದೆಗಳು
ಮೀನುಗಾರಿಕೆ ಫೀಲ್ಡ್ ಮ್ಯಾನ್ – 475 ಹುದ್ದೆಗಳು
ಕ್ಲರ್ಕ್ – 2 ಹುದ್ದೆಗಳು
ಸೇವಕ – 187 ಹುದ್ದೆಗಳು

ವೇತನ ವಿವರ :
ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ನೀಡಲಾಗುವ ವೇತನದ ವಿವರ ಇಂತಿದೆ.
ಮೀನುಗಾರಿಕೆ ಸಹಾಯಕ ನಿರ್ದೇಶಕರು – ತಿಂಗಳಿಗೆ 40,900/- ರಿಂದ 78,200/-ರೂ
ಪ್ರಥಮ ದರ್ಜೆ ಸಹಾಯಕರು – ತಿಂಗಳಿಗೆ 27,650/- ರಿಂದ 52,650/-ರೂ
ಶೀಘ್ರಲಿಪಿಗಾರ – ತಿಂಗಳಿಗೆ 27,650/- ರಿಂದ 52,650-ರೂ
ದ್ವಿತೀಯ ದರ್ಜೆ ಸಹಾಯಕರು – ತಿಂಗಳಿಗೆ 21,400/- ರಿಂದ 42,000/-ರೂ
ಡೇಟಾ ಎಂಟ್ರಿ ಅಸಿಸ್ಟೆಂಟ್ – ತಿಂಗಳಿಗೆ 21,400/- ರಿಂದ 42,000/-ರೂ
ಚಾಲಕರು – ತಿಂಗಳಿಗೆ 21,400/- ರಿಂದ 42,000/-ರೂ
ಮೀನುಗಾರಿಕೆ ಫೀಲ್ಡ್ ಮ್ಯಾನ್ – ತಿಂಗಳಿಗೆ 18,600/- ರಿಂದ 32,600/-ರೂ
ಕ್ಲರ್ಕ್ – ತಿಂಗಳಿಗೆ 18,600/- ರಿಂದ 32,600/-ರೂ
ಸೇವಕ – ತಿಂಗಳಿಗೆ 17,000/- ರಿಂದ 28,950/-ರೂ

ಆಯ್ಕೆ ಪ್ರಕ್ರಿಯೆ:
ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ,ಸಂದರ್ಶನ ಮತ್ತು ಮುಂಬಡ್ತಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ :
ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top