fbpx
ಸಮಾಚಾರ

ಬಾಕ್ಸ್ ಆಫೀಸ್ ನಲ್ಲಿ ರಾಜಮೌಳಿಯ RRR V/S ಜೇಮ್ಸ್ ಫೈಟ್

ದೇಶಾದ್ಯಂತ ಕೊರೋನಾ ಮೂರನೇ ಅಲೆ ಜೋರಾಗಿದ್ದು ಅನೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಇನ್ನೂ ಕೆಲ ರಾಜ್ಯಗಳಲ್ಲಿ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಹಾಗಾಗಿ 2022ರ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ಹಲವು ಚಿತ್ರಗಳು ಮುಂದೂಡಿವೆ. ಅದರಲ್ಲಿ RRR ಚಿತ್ರ ಕೂಡ ಒಂದು.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ RRR ಚಿತ್ರ ಜನವರಿ ಮೊದಲ ವಾರದಲ್ಲಿ ತೆರೆಕಾಣಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಚಿತ್ರದ ಬಿಡುಗಡೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿತ್ತು. ಇದೀಗ ಸಿನಿಮಾ ಮತ್ತೆ ಯಾವಾಗ ರಿಲೀಸ್ ಎನ್ನುವ ಬಗ್ಗೆ ಚಿತ್ರ ತಂಡ ಅಧಿಕೃತ ಮಾಹಿತಿ ನೀಡಿದೆ. ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದರೆ ಮತ್ತು ಥಿಯೇಟರ್ ಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿ ಅವಕಾಶ ನೀಡಿದರೆ, ನಾವು ಚಿತ್ರವನ್ನು 2022 ಮಾರ್ಚ್ 18ಕ್ಕೆ ರಿಲೀಸ್ ಮಾಡುತ್ತೇವೆ. ಇಲ್ಲವಾದಲ್ಲಿ RRR ಚಿತ್ರ 2022 ಏಪ್ರಿಲ್ 28ಕ್ಕೆ ರಿಲೀಸ್ ಆಗಲಿದೆ” ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವತಃ RRR ಚಿತ್ರತಂಡ ಹೇಳಿಕೊಂಡಂತೆ ಕೊರೋನಾ ಆರ್ಭಟ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸಿದರೆ 2022 ಮಾರ್ಚ್ 18ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಹಾಗೊಮ್ಮೆ 2022 ಮಾರ್ಚ್ 18 ರಂದು ಬಿಡುಗಡೆಗೊಂಡರೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಫೈಟ್ ಎದುರಾಗಲಿದೆ.. ಏಕೆಂದರೆ ಸದರಿ ದಿನಾಂಕದ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ತೆರೆಗೆ ಬರುತ್ತಿದೆ.

‘ಜೇಮ್ಸ್’ ಚಿತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಟನೆಯ ಕೊನೆ ಸಿನಿಮಾಗಳಲ್ಲಿ ಒಂದು. ಈ ಚಿತ್ರವನ್ನು ಅಪ್ಪು ಹುಟ್ಟುಹಬ್ಬದ(ಮಾರ್ಚ್ 17) ಪ್ರಯುಕ್ತ ತೆರೆಗೆ ತರಲು ಕೆಲ್ಸಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲ್ಸಗಳು ಸಹ ಮುಗಿಯುವ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ಕಾರ್ಯವನ್ನು ಸಹ ಆರಂಭಿಸಲಾಗುತ್ತದೆ.

ಒಂದೇ ದಿನದ ಅಂತರದಲ್ಲಿ ಜೇಮ್ಸ್ ಮತ್ತು RRR ಚಿತ್ರಗಳು ತೆರೆಗೆ ಬಂದರೆ ಕರ್ನಾಟಕದಲ್ಲಂತೂ ಜೇಮ್ಸ್ ಗೆ ಅನುಕೂಲವಾಗುತ್ತದೆ. ಯಾಕೆಂದರೆ ಅಪ್ಪುವನ್ನು ಕೊನೆಯ ಬಾರಿಗೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಇಡೀ ಕರ್ನಾಟಕವೇ ಕಾದು ಕುಳಿತಿದೆ. ತೆಲುಗು ಚಿತ್ರಗಳಿಗೆ ಕರ್ನಾಟಕದಲ್ಲಿಯೂ ದೊಡ್ಡ ಮಾರ್ಕೆಟ್ ಇದೆ. ಒಂದು ವೇಳೆ RRR ಚಿತ್ರ ಜೇಮ್ಸ್ ಎದುರು ಬಂದರೆ ಕರ್ನಾಟಕದಲ್ಲಿ ದೊಡ್ಡ ಹೊಡೆತ ತಿನ್ನಲಿದೆ ಎಂಬುದು ಸಾಮಾನ್ಯ ಪ್ರೇಕ್ಷಕನ ಲೆಕ್ಕಾಚಾರ. ಹಾಗಾಗಿ RRR ಚಿತ್ರತಂಡ ಮಾರ್ಚ್ 18ರ ಬದಲು ಏಪ್ರಿಲ್ 28ಕ್ಕೆ ಬರುವುದೇ ಒಳಿತು ಎಂಬುದು ಸಿನಿ ಪಂಡಿತರ ಮಾತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top