fbpx
ಸಮಾಚಾರ

ಅಭಿಮಾನಿಗೆ ಗುಡ್ ನ್ಯೂಸ್ ಕೊಟ್ರು ಮೇಘನಾ ರಾಜ್: ಇನ್ಮುಂದೆ ಪ್ರತೀ ವಾರ ಬರ್ತಾರೆ

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣದ ಜೇವನಕ್ಕೆ ಮರಳಿದ್ದಾರೆ. ಇಷ್ಟು ದಿನ ಮುದ್ದು ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ ರಾಜ್ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ.

ಖಾಸಗಿ ವಾಹಿನಿಯಲ್ಲಿ ರಸರವಾಗುವ ಡ್ಯಾನ್ಸಿಂಗ್ ರಿಯಾಲಿಟಿ ಶೋಗೆ ಕಳೆದ ವಾರ ಮೇಘನಾ ರಾಜ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಮೇಘನಾ ನೀಡಿದ್ದ ಕಾಮೆಂಟ್ ಮತ್ತು ಸಲಹೆಗಳು ಸ್ಪರ್ಧಿಗಳು ಮತ್ತು ವೀಕ್ಷಕರ ಮನಸ್ಸು ಮುಟ್ಟಿದೆ. ಯಾರಿಗೂ ನೋವು ಮಾಡದೆ ವಿಚಾರವನ್ನು ಸ್ಪಷ್ಟವಾಗಿ ಹೇಳುವ ಕಾರಣ ಮೇಘನಾ ಅವರೇ ಜಡ್ಜ್ ಆಗಿ ಇರಬೇಕು ಎಂದು ವೀಕ್ಷಕರು ಆಸೆಪಟ್ಟಿದ್ದರು. ಹೀಗಾಗಿ ವೀಕ್ಷಕರ ಒತ್ತಾಸೆಯಂತೆ ಬೇಡಿಕೆಯಂತೆ ಮೇಘನಾ ಮತ್ತೆ ಆಗಮಿಸಿದ್ದಾರೆ.

 

 

ಅಭಿಮಾನಿಗಳ ಆಸೆಯಂತೆ ಮೇಘನಾ ಈ ಕಾರ್ಯಕ್ರಮವನ್ನು ಒಪ್ಪಿಕೊಂಡು ತೀರ್ಪುಗಾರರಾಗಿ ಪ್ರತಿ ವೀಕೆಂಡ್‌ ನಿಮ್ಮ ಮುಂದೆ ಇರಲಿದ್ದಾರೆ. ಈ ವಿಚಾರವನ್ನು ಸ್ವತಃ ಮೇಘನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. ” ನಾನು ಮತ್ತೆ ಬರಬೇಕು ಎಂದು ನೀವು ಕಾಯುತ್ತಿದ್ದೀರಿ.. ಇಗೋ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ನ ಪರ್ಮನೆಂಟ್ ಜಡ್ಜ್‌ ಆಗಿ ನಾನು ಮತ್ತೆ ಬಂದಿರುವೆ.. ಖಂಡಿತ ಇದು ಅನಿರೀಕ್ಷಿತ. ಹೊಸ ಅನುಭವಗಳಿಗೆ ಕಾಯುತ್ತಿರುವೆ’ ಎಂದು ಮೇಘನಾ ರಾಜ್ ಮೂರನೇ ವಾರದ ಪ್ರೋಮೋ ಹಂಚಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

 

 

ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತ ಬ್ಯುಸಿ ಆಗಿದ್ದ ಮೇಘನಾ ಅವರು ಕಳೆದೊಂದು ಕಳೆದ ಕೆಲ ವರ್ಷದಿಂದೀಚೆಗೆ ನಟನೆಯಿಂದ ದೂರ ಉಳಿದುಕೊಂಡಿದ್ದರು. ಮದುವೆ, ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದರು. ಬದುಕಿನಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಸುಧಾರಿಸಿಕೊಳ್ಳಲು ಕೂಡ ಸಮಯ ಹಿಡಿಯಿತು. ಈಗ ಆ ಎಲ್ಲ ಸಂಕಷ್ಟಗಳನ್ನು ಎದುರಿಸಿ ಬಂದಿರುವ ಮೇಘನಾ ರಾಜ್​ ಅವರು ಮತ್ತೆ ಸಕ್ರಿಯರಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top