fbpx
ಸಮಾಚಾರ

ಮೊದಲ ಮಗುವಿನ ಸಂತಸದಲ್ಲಿ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್

ಬಾಲಿವುಡ್ ನಟಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ದಂಪತಿ ಇದೀಗ ಮೊದಲ ಮಗುವಿನ ಸಂಭ್ರಮದಲ್ಲಿದ್ದಾರೆ. ಸರೋಗಸಿ ( ಬಾಡಿಗೆ ತಾಯ್ತನ) ಮೂಲಕ ತಾವು ಪೋಷಕರಾಗಿ ಭಡ್ತಿ ಪಡೆದಿರುವುದಾಗಿ ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

 

 

“ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಸ್ವಾಗತಿಸುತ್ತೇವೆ ಎಂಬ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಮಗೆ ಬಹಳ ಖುಷಿಯಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ನಾವು ಕುಟುಂಬದ ಬಗ್ಗೆ ಗಮನ ಹರಿಸುವ ಕಾರಣದಿಂದ ಖಾಸಗಿತನವನ್ನು ಉಳಿಸುವಂತೆ ಗೌರವಪೂರ್ವಕವಾಗಿ ಮನವಿ ಮಾಡುತ್ತೇನೆ. ಎಲ್ಲರಿಗೂ ಧನ್ಯವಾದಗಳು” ಎಂದು ಪ್ರಿಯಾಂಕಾ ಪೋಸ್ಟ್ ಮಾಡಿದ್ದಾರೆ.

ಅಂತರಾಷ್ಟ್ರೀಯ ಗಾಯಕ ನಿಕ್ ಜೊತೆಗೆ ಪ್ರಿಯಾಂಕ ಚೋಪ್ರ ವರ್ಷಾಂತರಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಕೊನೆಗೆ ಅವರಿಬ್ಬರೂ 2018ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದರು. ಮದುವೆಯ ನಂತರ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಈಗ ಮಗು ಪಡೆದು ತಮ್ಮ ಕುಟುಂಬದನ್ನು ಬೆಳೆಸಲು ಮುಂದಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top