fbpx
ಸಮಾಚಾರ

ಪುನೀತ್ ಪುಟಾಣಿ ಅಭಿಮಾನಿಗಳಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ – ಶಿವಣ್ಣನ ಭೇಟಿಗೆ ಹಾತೊರೆಯುತ್ತಿದ್ದಾರೆ ಪುಟ್ಟ ಫ್ಯಾನ್ಸ್

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‍ನ ಅಣ್ಣತಂಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಚಂದ್ರಕಲಾ ಮತ್ತು ಯಲ್ಲಪ್ಪ ದಂಪತಿಯ ಮಕ್ಕಳಾದ ಸಂಜನಾ ಮತ್ತು ಶಿವರಾಜ್ ಪುಟಾಣಿ ಅಣ್ಣ ತಂಗಿ ಸಾಮಾನ್ಯ ಜ್ಞಾನ ವಿಷಯಗಳನ್ನು ಪಟಪಟನೇ ಹೇಳುವುದರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.

ಮುದುಗಲ್ ಎಸ್‌ವಿಎಸ್ ಶಾಲೆಯಲ್ಲಿ ಮೂರನೆ ತರಗತಿ ಓದುತ್ತಿರುವ ಸಂಜನಾ ಹಾಗೂ ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತಿರುವ ಶಿವರಾಜ್, ಆಗಾಧ ನೆನಪಿನ ಶಕ್ತಿ ಹೊಂದಿದ್ದಾರೆ. ಸಾಮಾನ್ಯ ಜ್ಞಾನದಲ್ಲಿ ಒಟ್ಟು 10 ಸಾವಿರ ಪ್ರಶ್ನೆಗಳಿಗೆ ಉತ್ತರಿಸಿ ಸಾಧನೆ ಮಾಡಿದ್ದಾರೆ.

ನಟ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಗಳಾಗಿರುವ ಅಣ್ಣ ತಂಗಿ ತಮ್ಮ ಸಾಧನೆಯ ಪ್ರಮಾಣ ಪತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರಿಂದಲೇ ಪಡೆಯಬೇಕು ಎಂದು ಮಕ್ಕಳು ಹಂಬಲಿಸುತ್ತಿದ್ದಾರೆ.

“ಈ ಮಕ್ಕಳು ಪುನೀತ್ ರಾಜಕುಮಾರ್ ಅಭಿಮಾನಿ ಯಾಗಿದ್ದರಿಂದ ಈ ದಾಖಲೆ ಪ್ರಮಾಣ ಪತ್ರ ಅವರೇ ಕಡೆಯಿಂದ ತೆಗೆದು ಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ ಪುನೀತ್ ಅವರು ನಮ್ಮ ಜೊತೆ ಇಲ್ಲದಕಾರಣ ಈ ಪ್ರಮಾಣ ಪತ್ರವನ್ನು ಅವರ ಸಮಾಧಿಯ ಪಾದ ಕಮಲಗಳಿಗೆ ಅರ್ಪಿಸಿ ಡಾ.ಶಿವರಾಜ ಕುಮಾರರಿಂದ ಪಡೆದುಕೊಳ್ಳಬೇಕು ಎಂದು ಈ ಮಕ್ಕಳ ಆಸೆ ಇದೆ” ಎಂದು ಪುಟೈಗಳ ಶಿಕ್ಷಕರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top