fbpx
ಸಮಾಚಾರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಅಪ್ಪು ಕೊನೆ ಸಿನಿಮಾ ಜೇಮ್ಸ್ ನಲ್ಲಿ ನಟಿಸಲಿದ್ದಾರೆ ಶಿವಣ್ಣ, ರಾಘಣ್ಣ

ವರನಟ ರಾಜಕುಮಾರ್ ಅವರ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಒಂದೇ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಬಹುವರ್ಷಗಳ ಬೇಡಿಕೆ. ಮೂವರು ಸಹೋದರರನ್ನು ಹಾಕಿಕೊಂಡು ಸಿನಿಮಾ ಮಾಡುವ ಪ್ರಯತ್ನ ನಡೆದರೂ ಕೊನೆವರೆಗೂ ಅದು ಸಾಧ್ಯವಾಗಲೇ ಇಲ್ಲ. ಕಳೆದ ವರ್ಷ ಪುನೀತ್ ನಿಧನದ ಮೂಲಕ ಅಣ್ಣಾವ್ರ ಮಕ್ಕಳನ್ನ ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಅಸೆ ಶಾಶ್ವತ ತೆರೆ ಬಿದ್ದಿತ್ತು.

ಆದರೆ ಒಂದೇ ಸಿನಿಮಾದಲ್ಲಿ ಅಣ್ಣಾವ್ರ ಮಕ್ಕಳನ್ನ ನೋಡಬೇಕೆನ್ನುವ ಅಭಿಮಾನಿಗಳ ಆಸೆಗೆ ಮತ್ತೆ ಜೀವ ಬಂದಿದೆ. ಹೌದು, ‘ಜೇಮ್ಸ್​’ ಸಿನಿಮಾ ನಿರ್ದೇಶಕ ಚೇತನ್​ ಕುಮಾರ್​ ಅವರು ಹೀಗೊಂದು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಪುನೀತ್​ ನಟನೆಯ ಕೊನೆಯ ಸಿನಿಮಾದ ಜೇಮ್ಸ್ ಚಿತ್ರದಲ್ಲಿ ಶಿವಣ್ಣ ಮತ್ತು ರಾಘಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅಣ್ಣಾವ್ರ ಮಕ್ಕಳನ್ನ ಒಂದೇ ಸಿನಿಮಾದಲ್ಲಿ ಕಾಣಿಸಬೇಕು ಎಂಬ ಉದ್ದೇಶದಿಂದ ಚಿತ್ರತಂಡ ಈಗಾಗಲೇ ತಯಾರಿ ಮಾಡಿಕೊಂಡಿದೆ.

ಪುನೀತ್​ ರಾಜ್​ಕುಮಾರ್​ ಅವರ ಕೊನೆ ಚಿತ್ರ ಜೇಮ್ಸ್ ನಲ್ಲಿ ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಅವರು ನಟಿಸುತ್ತಾರೆ ಎಂಬ ಮಾಹಿತಿ ತಿಳಿದುಬಂದಿದೆ. ಶೀಘ್ರದಲ್ಲೇ ಶೂಟಿಂಗ್​ನಲ್ಲಿ ರಾಘಣ್ಣ ಮತ್ತು ಶಿವಣ್ಣ ಭಾಗವಹಿಸಲಿದ್ದಾರೆ. ಸಿನಿಮಾದ ಯಾವುದಾದರೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಬಾಕಿ ಉಳಿದಿರುವ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರಾ? ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top