fbpx
ಸಮಾಚಾರ

ಮುದ್ದು ಮಗಳಿಗೆ ಯಶ್ ಕನ್ನಡ ಕ್ಲಾಸ್: ‘ಅ ಆ ಇ ಈ’ ಹೇಳಿಕೊಟ್ಟ ರಾಕೀ ಭಾಯ್: ವಿಡಿಯೋ ವೈರಲ್

ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ಮಗಳು ಕನ್ನಡ ಅಕ್ಷರಗಳನ್ನ ಕಲಿಸುತ್ತಿರುವ ವಿಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯಶ್ ಅವರು ತಮ್ಮ ಮುದ್ದು ಮಗಳು ಐರಾಗೆ ಅ ಆ ಇ ಈ ಹೇಳಿಕೊಟ್ಟಿದ್ದಾರೆ. ಈ ಮುದ್ದಾದ ವೀಡಿಯೋವನ್ನು ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ವೀಕೆಂಡ್ ಸ್ವೆಷಲ್ ಕ್ಲಾಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

 

 

ಸೋಫಾ ಮೇಲೆ ಕುಳಿತು ಮಗಳನ್ನ ತೊಡೆಯ ಮೇಲೆ ಕುಳಿಸಿಕೊಂಡಿರುವ ಯಶ್ ಅ, ಆ, ಇ, ಈ ಎಂದು ಕನ್ನಡ ವರ್ಣಮಾಲೆಗಳನ್ನು ಹೇಳಿಕೊಂಡುತ್ತಾರೆ. ಆಗ ಐರಾ ಸಹ ಯಶ್ ಹೇಳಿದ ರೀತಿಯಲ್ಲಿಯೇ ಮುದ್ದಾಗಿ ಹೇಳುತ್ತಾಳೆ. ಯಶ್ ಮಗಳನ್ನು ಸೂಪರ್ ಎಂದು ಹೈ ಫೈವ್ ಕೊಡುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top