fbpx
ಸಮಾಚಾರ

ಈ ಬಾರಿ ಗಣರಾಜ್ಯೋತ್ಸವದ ನಿರೂಪಣೆಗೆ ಅಪರ್ಣಾಗಿಲ್ಲ ಅವಕಾಶ: ಕಾರಣ ಇದೇನಾ?

ಕನ್ನಡ ಭಾಷೆ ಮೇಲೆ ಚೆಂದದ ಹಿಡಿತ ಹೊಂದಿ ಅಷ್ಟೇ ಸರಳ, ಸ್ವಚ್ಛವಾಗಿ ಕನ್ನಡ ಆಡುವಾಕೆಯೆಂದೇ ಹೆಸರು ಮಾಡಿರುವವರು ನಿರೂಪಿಕಿ ಅಪರ್ಣಾ. ಎಷ್ಟೇ ಸಾಧನೆಗಳ ಶಿಖರವನ್ನು ಏರಿದರು ತೀರಾ ಸರಳ, ಸಜ್ಜನ, ಮೃದು ಸ್ವಾಭಾವಿ, ಎಲ್ಲಕ್ಕೂ ಮಿಗಿಲಾಗಿ ಸ್ವಚ್ಛ ಮನಸಿನ ಅಚ್ಚ ಕನ್ನಡತಿ,.. ಟಿವಿ ನಿರೂಪಕಿಯಾಗಿ , ರೇಡಿಯೋ ಜಾಕಿಯಾಗಿ ನಟಿಯಾಗಿ ಖ್ಯಾತಿಗಳಿಸಿರುವ ಅಪರ್ಣ ಕನ್ನಡಿಗರ ಆಲ್ ಟೈಮ್ ಫೆವರಿಟ್ ನಿರೂಪಕಿಯರಲ್ಲಿ ಮಿಂಚೂಣಿಯಲ್ಲಿ ನಿಲ್ಲುತ್ತಾರೆ,.

ಸಾಮಾನ್ಯವಾಗಿ ಅಪರ್ಣವ ಅವರು ಬಹುತೇಕ ಸರ್ಕಾರೀ ಕಾರ್ಯಕ್ರಮಗಳ ನಿರೂಪಣೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಸ್ವಾತಂತ್ರೋತ್ಸದಿಂದ ಹಿಡಿದು ಗಣರಾಜ್ಯೋತ್ಸವ ತನಕ ಯಾವುದೇ ಸರ್ಕಾರೀ ಕಾರ್ಯಕ್ರಮಗಳಿಗೆ ಅಪರ್ಣ ಅವರು ನಿರೂಪಣೆ ಮಾಡಿದರೆ ಚಂದ ಅನಿಸುತ್ತದೆ. ಅಷ್ಟರ ಮಟ್ಟಿಗೆ ಅವರ ಅಚ್ಚುಕಟ್ಟುತನದ ನಿರೂಪಣೆಗೆ ಎಲ್ಲರಿಗೂ ಇಷ್ಟವಾಗುತ್ತದೆ.. ಆದ್ರೆ ಈ ಬಾರಿಯ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಪರ್ಣ ಅವ್ರು ನಿರೂಪಣೆ ಮಾಡಿಲ್ಲ. ಅವರ ಬದಲಿಗೆ ಡಾ.ಗಿರಿಜಾ ನಿರೂಪಣೆ ಮಾಡಿದ್ದಾರೆ.

 

 

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಅಪರ್ಣಾ ಹಾಗೂ ಶಂಕರ್ ಪ್ರಕಾಶ್ ಅವರು ನಿರೂಪಕರಾಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ಇಂದಿನ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಂಕರ್ ಪ್ರಕಾಶ್ ಅವರ ಜೊತೆಯಲ್ಲಿ ಡಾ.ಗಿರಿಜಾ ಎಂಬವರು ನಿರೂಪಣೆ ಮಾಡಿದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಈ ಹಿಂದೆ ಡಾ.ಗಿರಿಜಾ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿಗಳ ನಿವಾಸದ ಮುಂದೆಯೇ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಈ ಹಿನ್ನೆಲೆ ಜಿಲ್ಲಾಡಳಿತ ಡಾ.ಗಿರಿಜಾ ಅವರಿಗೆ ನಿರೂಪಣೆ ಮಾಡಲು ಅವಕಾಶ ನೀಡಿರಬಹುದು ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top