fbpx
ಸಮಾಚಾರ

ಅಯ್ಯಯ್ಯೋ.. ಅಖಂಡ ಸಿನಿಮಾ ನೋಡಿದ್ದಕ್ಕೆ ಕೇಸ್​ ಹಾಕ್ತವರಂತೆ: ಕಾರಣ ಕೇಳಿದ್ರೆ ಬೇಜಾರಾಗುತ್ತೆ

ಬಾಲಕೃಷ್ಣ ನಟನೆಯ ‘ಅಖಂಡ’ ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು. ಬಾಲಕೃಷ್ಣ ಹಾಗೂ ಬೊಯಾಪಟ್ಟಿ ಶ್ರೀನು ಜೋಡಿ ಮತ್ತೆ ಟಾಲಿವುಡ್‌ ಅಂಗಳದಲ್ಲಿ ಮ್ಯಾಜಿಕ್ ಮಾಡಿ ಎಲ್ಲರ ಹುಬ್ಬೇರಿಸಿತ್ತು.ಸದ್ಯಕ್ಕೆ ಈ ಸಿನಿಮಾವೀಗ ಒಟಿಟಿಯಲ್ಲೂ ಬಿಡುಗಡೆಯಾಗಿದ್ದು, ಅಲ್ಲೂ ಯಶಸ್ವಿ ಕಾಣುತ್ತಿದೆ. ಆದರೆ ಇದೀಗ ಅಖಂಡ ಸಿನಿಮಾ ನೋಡಿದ ಈ ಹಳ್ಳಿಯ ಗ್ರಾಮಸ್ಥರಿಗೆ ಸಂಕಷ್ಟ ಶುರುವಾಗಿದೆ.. ಏನಿದು ವಿಚಾರ ಅಂತೀರಾ? ಮುಂದೆ ಓದಿ

ಆಂಧ್ರದ ಹಳ್ಳಿಯೊಂದರಲ್ಲಿ ಜನರು ತಾವೇ ಬೆಳ್ಳಿ ಪರದೆಯೊಂದನ್ನು ತರಿಸಿಕೊಂಡು ಅದರ ಮೂಲಕ ಇಡೀ ಹಳ್ಳಿ ಜನ ಒಟ್ಟಿಗೆ ಕೂತು ಸಿನಿಮಾ ನೋಡಿದ್ದಾರೆ. ಆದರೆ ಆಂಧ್ರದ ಗ್ರಾಮಸ್ಥರು ಅನುಮತಿಯನ್ನು ಪಡೆಯದೆ ಸಿನಿಮಾ ನೋಡಿದ್ದು, ರಾಜ್ಯ ಸರ್ಕಾರದಿಂದ ಈ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ.

 

 

ಊರಿನ ಜನರೆಲ್ಲಾ ಒಟ್ಟಿಗೆ ಕೂತು ಅಖಂಡ ಸಿನಿಮಾ ನೋಡುತ್ತಿರುವ ಫೋಟೋ, ವಿಡಿಯೋಗಳನ್ನು ಬಾಲಕೃಷ್ಣ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ಅಧಿಕಾರಿಗಳು ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಹೇಳಿ ಕೇಸ್​ ದಾಖಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾನೂನು ಬಾಹಿರ:
ಡಿಸ್ನಿ ಹಾಟ್‌ಸ್ಟಾರ್ ಅನ್ನು ಪ್ರೊಜೆಕ್ಟರ್‌ಗೆ ಅಳವಡಿಸಿ ಅದರ ಮೂಲಕ ಅಖಂಡ ವೀಕ್ಷಿಸಿದ್ದರು. ಪರದೆಗೆ ತಕ್ಕಂತೆ ದೊಡ್ಡ ಸೌಂಡ್ ಸಿಸ್ಟಿಮ್ ಹಾಕಲಾಗಿತ್ತು. ಇದು ಸಿನಿಮಾಟೊಗ್ರಫಿ ಕಾಯ್ದೆ ಪ್ರಕಾರ ಕಾನೂನು ಬಾಹಿರ ಎನ್ನಲಾಗಿದ್ದು ಯಾವುದೇ ಒಟಿಟಿಯ ಸಿನಿಮಾ, ಇಲ್ಲವೆ ವೆಬ್ ಸಿರೀಸ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಎಂಬ ಕಾನೂನು ಇದೆಯಂತೆ. ಹೀಗಾಗಿ ಗಾಮಸ್ಥರಿಗೆ ಕಾನೂನು ಭಯ ಶುರುವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top