fbpx
ಸಮಾಚಾರ

“ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್” ಪುನೀತ್ ಕೊನೆ ಚಿತ್ರ ‘ಜೇಮ್ಸ್’ ಹೊಸ ಪೋಸ್ಟರ್ ರಿಲೀಸ್

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಮೂರು ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ 3 ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ. ಪುನೀತ್ ಅವರು ಬದುಕಿದ್ದಾಗ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್.. ಚಿತ್ರಕ್ಕೆ ತಮ್ಮ ಭಾಗದ ಸಂಪೂರ್ಣ ಚಿತ್ರಗಳನ್ನು ಮುಗಿಸಿದ ಪುನೀತ್ ಅವರು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ವಿಧಿ ಆಟವೇ ಬೇರೆಯಾಗಿ ಅವ್ರು ನಮ್ಮಿಂದ ದೂರ ವಾಗಿದ್ದಾರೆ..

 

 

ಪುನೀತ್ ಅವರ ಅನುಪಸ್ಥಿಯಲ್ಲಿಯೇ ಬಾಕಿ ಉಳಿದಿದ್ದ ದೃಶ್ಯಗಳ ಶೂಟಿಂಗ್ ಅನ್ನು ನಿರ್ದೇಶಕ ಚೇತನ್ ಮುಗಿಸಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಿದ್ದಾರೆ. ಈ ಮದ್ಯೆ ಚಿತ್ರದ ಪೋಸ್ಟರ್ ಅನ್ನು ಗಣರಾಜ್ಯೋತ್ಸವದಂದು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಅದರಂತೆ ಇಂದು ಜೇಮ್ಸ್ ಸಿನಿಮಾದ ಪೋಸ್ಟರ್ ಬಿಡುಗಡೆಗೊಂಡಿದ್ದು, ಅಶ್ವಿನಿ ಪುನೀತ್ ರಾಜ್‍ಕುಮಾರ್, ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು ಅಪ್ಪು ಹುಟ್ಟುಹಬ್ಬದ ದಿನ(ಮಾರ್ಚ್ 17)ದಂದೇ ಸಿನಿಮಾ ಬಿಡುಗಡೆ ಮಾಡಲು ಯೋಜಿಸಲಾಗಿದೆ. ರಾಜಕುಮಾರ ಸಿನಿಮಾದಲ್ಲಿ ಪುನೀತ್ ನಾಯಕಿಯಾಗಿದ್ದ ಪ್ರಿಯಾ ಆನಂದ್ ಅವರೇ ಜೇಮ್ಸ್ ಚಿತ್ರದಲ್ಲೂ ಅಪ್ಪು ಗೆ ನಾಯಕಿಯಾಗಿದ್ದಾರೆ. ಇನ್ನು ಚಿತ್ರದಲ್ಲಿ ಶ್ರೀಕಾಂತ್, ಆದಿತ್ಯ ಮೆನನ್ ಹಾಗೂ ಅನು ಪ್ರಭಾಕರ್, ಮುಖೇಶ್ ರಿಷಿ, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top