fbpx
ಸಮಾಚಾರ

ಪ್ರಿಯಾಂಕಾ-ನಿಕ್ ದಂಪತಿ ಮಗು ಅವಧಿಗೂ 3 ತಿಂಗಳು ಮುನ್ನ ಜನಿಸಿದ್ದಕ್ಕೆ ಕಾರಣ ಇದೇನಾ?? ವರದಿ ಹೇಳೋದಿದು

ಬಾಲಿವುಡ್ ನಟಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ದಂಪತಿ ಇದೀಗ ಮೊದಲ ಮಗುವಿನ ಸಂಭ್ರಮದಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅವಧಿಗೂ ಮುನ್ನವೇ ಅಂದ್ರೆ ಆರೂವರೆ ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಏಪ್ರಿಲ್‍ನಲ್ಲಿ ಮಗುವಿನ ಆಗಮನವಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ 12 ವಾರಗಳ ಮೊದಲೇ ಹೆಣ್ಣು ಮಗು ಅಮೆರಿಕದ ಲಾಸ್ ಎಂಜಲೀಸ್ ಆಸ್ಪತ್ರೆಯಲ್ಲಿ ಜನಿಸಿದೆ. ಬಾಡಿಗೆ ತಾಯಿ 27 ವಾರಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿಯೇ ಪ್ರಿಯಾಂಕಾ ತಾಯಿಯಾಗಿದ್ದಾರೆ. 6 ತಿಂಗಳಿಗೆ ಹುಟ್ಟಿದ ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು, ಬಾಡಿಗೆ ತಾಯಿ ವಾರ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಸ್ವತಃ ಗರ್ಭ ಧರಿಸಲು ಪ್ರಿಯಾಂಕಾ ಚೋಪ್ರಾ ಅವರಿಗೆ ದೈಹಿಕವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಅವರ ಬ್ಯುಸಿ ಶೆಡ್ಯೂಲ್‌ನಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು SoCal ಏಜೆನ್ಸಿಯನ್ನು ಸಂಪರ್ಕಿಸಿದ್ದರು. ಪ್ರಿಯಾಂಕಾ ಸಂಪರ್ಕ ಮಾಡಿದ್ದ ಈ ಮಹಿಳೆಯದ್ದು ಐದನೇ ಬಾಡಿಗೆ ತಾಯ್ತನ ಎಂದು ಡೈಲಿಮೇಲ್ ಡಾಟ್ ಕಾಮ್‌ ವರದಿ ಹೇಳಿವೆ.

ಸರೋಗಸಿ ( ಬಾಡಿಗೆ ತಾಯ್ತನ) ಮೂಲಕ ತಾವು ಪೋಷಕರಾಗಿ ಭಡ್ತಿ ಪಡೆದಿರುವುದಾಗಿ ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. “ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಸ್ವಾಗತಿಸುತ್ತೇವೆ ಎಂಬ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಮಗೆ ಬಹಳ ಖುಷಿಯಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ನಾವು ಕುಟುಂಬದ ಬಗ್ಗೆ ಗಮನ ಹರಿಸುವ ಕಾರಣದಿಂದ ಖಾಸಗಿತನವನ್ನು ಉಳಿಸುವಂತೆ ಗೌರವಪೂರ್ವಕವಾಗಿ ಮನವಿ ಮಾಡುತ್ತೇನೆ. ಎಲ್ಲರಿಗೂ ಧನ್ಯವಾದಗಳು” ಎಂದು ಪ್ರಿಯಾಂಕಾ ಪೋಸ್ಟ್ ಮಾಡಿದ್ದಾರೆ.

ಅಂತರಾಷ್ಟ್ರೀಯ ಗಾಯಕ ನಿಕ್ ಜೊತೆಗೆ ಪ್ರಿಯಾಂಕ ಚೋಪ್ರ ವರ್ಷಾಂತರಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಕೊನೆಗೆ ಅವರಿಬ್ಬರೂ 2018ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದರು. ಮದುವೆಯ ನಂತರ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಈಗ ಬಾಡಿಗೆ ತಾಯಿ ಮೂಲಕ ಮಗು ಪಡೆದು ತಮ್ಮ ಕುಟುಂಬದನ್ನು ಬೆಳೆಸಲು ಮುಂದಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top