fbpx
ಸಮಾಚಾರ

‘ತೋತಾಪುರಿ’ ಸಾಂಗ್ ಟೀಸರ್ ವಿರುದ್ಧ ಪ್ರೇಕ್ಷಕರು ಛೀಮಾರಿ: ಕನ್ನಡಿಗರ ಆಕ್ರೋಶ

ನೀರ್ದೋಸೆ ಚಿತ್ರದ ಯಶಸ್ಸಿನ ಬಳಿಕ ‘ತೋತಾಪುರಿ’ ಚಿತ್ರದ ಮೂಲಕ ನಿರ್ದೇಶಕ ವಿಜಯಪ್ರಸಾದ್ ಮತ್ತು ಜಗ್ಗೇಶ್ ಕಾಂಬೋ ಮತ್ತೆ ಒಂದಾಗಿದೆ. ಹಿಟ್ ಕಾಂಬಿನೇಷನ್ ಆದ ಕಾರಣಕ್ಕೆ ತೋತಾಪುರಿ ಚಿತ್ರದ ಮೇಲೆ ಒಂದು ವಲಯದ ಪ್ರೇಕ್ಷಕ ವರ್ಗಕ್ಕೆ ನಿರೀಕ್ಷೆ ಇರುವುದು ಸುಳ್ಳಲ್ಲ. ಇಂಥಾ ತೋತಾಪುರಿ ಸಿನಿಮಾದಿಂದ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಹಾಡಿನ ಟೀಸರ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

 

 

ತೋತಾಪುರಿ ಟೀಸರ್ ಮೇಲೆ ಕನ್ನಡಿಗರು ಕೋಪಗೊಳ್ಳಲು ಕಾರಣ ಸಾಂಗ್ ಟೀಸರ್‌ನಲ್ಲಿರುವ ಹಿಂದಿ ಸಾಹಿತ್ಯ. ಸಣ್ಣದಾದ ಹಾಡಿನ ಝಲಕ್‍ನಲ್ಲಿ ಹಿಂದಿ ಹಾಗೂ ಉರ್ದು ಭಾಷೆಯಲ್ಲಿರುವ ಸಾಹಿತ್ಯ ಕಂಡು ನೋಡುಗರು ಚಿತ್ರತಂಡದ ಮೇಲೆ ಕೋಪಗೊಂಡಿದ್ದಾರೆ. ಇನ್ನು ಈ ಟೀಸರ್ ನಲ್ಲಿ ಒಂದೇ ಒಂದು ಕನ್ನಡ ಪದ ಇಲ್ಲ ಎನ್ನುವುದು ನಿಜಕ್ಕೂ ಆಘಾತಕಾರಿ ವಿಚಾರ.

“ಕಭಿ ಕಿಸಿಸೇ ಪ್ಯಾರ್ ಕಿಯಾ… ಕಿಯಾ. ಕಭಿ ಕಿಸಿಕೋ ದಿಲ್ ದಿಯಾ… ದಿಯಾ. ಚೂ**ತ್ಯಾ…” ಎಂಬ ಸಾಲುಗಳು ಟೀಸರ್ ನಲ್ಲಿ ಬರುತ್ತವೆ. ಕೊನೆಯಲ್ಲಿ ಬರುವ ಚೂ***ತ್ಯಾ ಎಂಬ ಪದದ ವಿರುದ್ಧ ಸಾಮಾನ್ಯ ಪ್ರೇಕ್ಷಕರು ಕೂಡ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಜಗ್ಗೇಶ್ ರಂತಹ ಹಿರಿಯ ನಟರು ಈ ರೀತಿಯ ಅಶ್ಲೀಲಾ ಪದಗಳ ಬಳಕೆಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಿರುವುದು ನಿಜಕ್ಕೂ ದುರಂತವೇ ಸರಿ ಎಂಬುದು ಪ್ರೇಕ್ಷಕರ ಒಮ್ಮತದ ಅಭಿಪ್ರಾಯವಾಗಿದೆ.

ಅಂದಹಾಗೆ ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top