fbpx
ಸಮಾಚಾರ

ವಿಶ್ವದ ಮೊತ್ತ ಮೊದಲ ಚಿನ್ನದ ಹೋಟೆಲ್: ಈ ಹೋಟೆಲ್ ಒಂದು ದಿನದ ಚಾರ್ಜ್ ಎಷ್ಟು?

ಚಿನ್ನ ಅಂದ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ. ಹಿಂದೆಲ್ಲಾ ರಾಜ ಮಹಾರಾಜರು ಚಿನ್ನದ ಅರಮನೆಯಲ್ಲಿ, ಚಿನ್ನದ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಿದ್ದರು ಅಂತ ಕೇಳಿದ್ದೇವೆ. ಆದ್ರೆ ಇಲ್ಲೊಬ್ಬರು ಚಿನ್ನದ ೨೪ ಅಂತಸ್ತಿನ ಕಟ್ಟಡವನ್ನೇ ಕಟ್ಟಿಸಿದ್ದಾರೆ. ಅಂದ್ಹಾಗೆ ಈ ಕಟ್ಟಡ ಅವರ ವಾಸಕ್ಕಲ್ಲ. ಬದಲಾಗಿ ಹೋಟೆಲ್ ಉದ್ಯಮಕ್ಕಾಗಿ. ಈ ಹೋಟೆಲ್ ಎಲ್ಲಿದೆ? ಈ ಹೋಟೆಲ್ ಒಂದು ದಿನದ ಚಾರ್ಜ್ ಎಷ್ಟು? ಈ ಹೋಟೆಲ್ ಕಟ್ಟೋದಿಕ್ಕೆ ಎಷ್ಟು ಖರ್ಚಾಗಿದೆ? ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಇಂತಹದ್ದೊAದು ಹೋಟೆಲ್ ಇರೋದು ವಿಯೆಟ್ನಾಂನ ರಾಜಧಾನಿ ಜಿಯಾಂಗ್ ವೋ ಲೇಕ್‌ನಲ್ಲಿ. ಈ ಐಷರಾಮಿ ಹೋಟೆಲ್ ಹೆಸರು ಡಾಲ್ಸ್ ಹನೋಯಿ ಗೋಲ್ಡನ್ ಲೇಕ್. ೨೪ ಅಂತಸ್ತಿನಲ್ಲಿರುವ ಈ ಹೋಟೆಲ್‌ನಲ್ಲಿ ೪೦೦ ಕೊಠಡಿಗಳಿಗೆ. ಅಮೇರಿಕಾದ ವಿಂಧಮ್ ಹೋಟೆಲ್ ಬ್ಯಾಂಡ್‌ನವರು ಈ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ.

ಸದ್ಯ ಹೋಟೆಲ್ ಬಾಡಿಗೆ ಬಗ್ಗೆ ಹೇಳ್ಬೇಕಂದ್ರೆ ಒಂದು ರಾತ್ರಿಯ ವಾಸ್ತವ್ಯಕ್ಕೆ ಇಲ್ಲಿ ೨೫೦ ಅಮೇರಿಕನ್ ಡಾಲರ್ ತೆರಬೇಕಾಗುತ್ತದೆಯಂತೆ. ಅಂದರೆ ಭಾರತದ ೧೮ ಸಾವಿರ ರುಪಾಯಿ. ಇಲ್ಲಿರುವ ಈಜುಕೊಳದಿಂದ ಹಿಡಿದು ಬಾತ್‌ರೂಮ್, ಟಾಯ್ಲೆಟ್, ಬೇಷಿನ್ ಹೀಗೆ ಎಲ್ಲವೂ ಚಿನ್ನದ್ದೇ. ಇದರ ಇಟ್ಟಿಗೆಗಳೂ ಅಪ್ಪಟ ೨೪ ಕ್ಯಾರೆಟ್ ಚಿನ್ನದಿಂದಲೇ ತಯಾರಿಸಲಾಗಿದೆ.

೨೪ ಕ್ಯಾರೆಟ್ ಗೋಲ್ಡ್ ಬಳಸಿ ನಿರ್ಮಿಸಿದ ಜಗತ್ತಿನ ಮೊತ್ತಮೊದಲ ಹೋಟೆಲ್ ಇದಾಗಿದ್ದು ೨೦೨೦ರಿಂದೀಚೆಗೆ ಕಾರ್ಯ ನಿರ್ವಹಿಸುತ್ತಿದೆ. ಕೊರೋನಾ ಹೊರತಾಗಿಯೂ ಇಲ್ಲಿ ಸಾಕಷ್ಟು ಗ್ರಾಹಕರು ಪ್ರತೀ ದಿನ ರೂಮ್ ಕಾಯ್ದಿರಿಸಿಕೊಳ್ಳುತ್ತಾರಂತೆ. ನೀವೂ ಯಾವತ್ತಾದರೂ ವಿಯೆಟ್ನಾಂಗೆ ಹೋದ್ರೆ ಈ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆದು ಬನ್ನಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top