fbpx
ಸಮಾಚಾರ

ಚೊಚ್ಚಲ ಮಗುವಿಗೆ ತಂದೆಯಾದ ಯುವರಾಜ್ ಸಿಂಗ್: ಅಪ್ಪನಾದ ಸಂಭ್ರಮದಲ್ಲಿ ಸಿಕ್ಸರ್ ಸಿಂಗ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಚೊಚ್ಚಲ ಮಗುವಿಗೆ ತಂದೆಯಾಗಿದ್ದಾರೆ. ಹೌದು, ಯುವಿ ಪತ್ನಿ ಹಜೆಲ್ ಕೀಚ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯದಿಂದ್ದಾರೆ.

 

 

ಇನ್ನು ತಂದೆಯಾಗಿರುವ ಖುಷಿಯ ವಿಚಾರವನ್ನು ಸ್ವತಃ ಯುವರಾಜ್ ಸಿಂಗ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.“ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ,…. ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂಬ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ. ನನ್ನ ಕುಟುಂಬಕ್ಕೆ ಪುಟ್ಟವನನ್ನು ಸ್ವಾಗತಿಸುವಾಗ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ”ಎಂದು ಅವರು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಯುವರಾಜ್ ಸಿಂಗ್ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಯುವರಾಜ್ ಮತ್ತು ಹಜೇಲ್ ಕೀಚ್ ಫತೇಘರ್ 2016 ನವೆಂಬರ್ 30ರಂದು ಸಿಖ್ ಧರ್ಮದ ಸಂಪ್ರದಾಯದ ಪ್ರಕಾರ ಸಾಹಿಬ್ ಗುರುದ್ವಾರದಲ್ಲಿ ಮದುವೆಯಾಗಿದ್ದರು. ಹಾಗೆಯೇ 2016ರ ಡಿಸೆಂಬರ್ 2ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮತ್ತೆ ವೈವಾಹಿಕ ವಿವಾಹವಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top