fbpx
ಸಮಾಚಾರ

ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆಯ ತಾಣವಾಗಿದ್ದ ಈ ಗ್ರಾಮ ಇಂದು ಕರ್ನಾಟಕದ ಪ್ರಮುಖ ಪ್ರವಾಸಿತಾಣ: ಈ ಕ್ಷೇತ್ರದ ಶಾಸಕರಿಗೆ ಭೇಷ್ ಅನ್ನಲೇಬೇಕು

ದಕ್ಷಿಣ ಜಿಲ್ಲೆಯ ಬೆಳ್ತಂಗಡಿಯ ಮಲವಂತಿಗೆ ಗ್ರಾಮ ಹಿಂದಿನಿಂದಲೂ ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಿಕೊಳ್ಳುತ್ತಿತ್ತು. ಪಚ್ಚಿಮ ಘಟ್ಟದ ಸುಂದರ ಪ್ರಕೃತಿಯ ಮಡಿಲಲ್ಲಿರುವ ಈ ಪುಟ್ಟ ಗ್ರಾಮ ಒಂದು ಕಾಲದಲ್ಲಿ ನಕ್ಸಲರ ಕೈಗೆ ಸಿಲುಕಿ ‘ಕುಗ್ರಾಮ’ ಎಂಬ ಕುಖ್ಯಾತಿ ಗಳಿಸಿತ್ತು. ಆದರೆ ಈಗ ಈ ಗ್ರಾಮ ಸಂಪೂರ್ಣವಾಗಿ ಬದಲಾಗಿದ್ದು ಸದ್ಯ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು ಎಂಬ ಮೆಚ್ಚುಗೆಯನ್ನ ಸಂಪಾದಿಸಿಕೊಂಡಿದೆ..

ನಕ್ಸಲರ ಕಪಿಮುಷ್ಟಯಿಂದ ಬಿಡಿಸಿ ಕುಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿ ಇಷ್ಟು ಪ್ರಸಿದ್ದಗೊಳಿಸುವಲ್ಲಿ ಸ್ಥಳೀಯ ಶಾಸಕರಾದ ಹರೀಶ್ ಪೂಂಜಾ ಪಾತ್ರ ಪ್ರಮುಖವಾಗಿದೆ. 2003ರಿಂದ 2013ರವರೆಗೆ ನಕ್ಸಲ್ ಚಟುವಟಿಕೆಯ ತಾಣವಾಗಿದ್ದ ಈ ಭಾಗದ ಜನರ ಉದ್ದಾರದ ಕಡೆಗೆ ಅಂದಿನ ಜನಪ್ರತಿನಿಧಿಗಳು ಗಮನ ಹರಿಸಿರಲಿಲ್ಲ. ರಸ್ತೆಗಳಿಲ್ಲದೇ, ಮೂಲ ಸೌಕರ್ಯಗಳಿಲ್ಲದೆ ಅಭಿವೃದ್ಧಿಗಳಿಂದ ವಂಚಿತವಾಗಿದ್ದ ಮಲವಂತಿಗೆ ‘ಕುಗ್ರಾಮ’ ಎಂಬ ಹಣೆಪಟ್ಟಿ ಪಡೆದು ಅಭಿವೃದ್ಧಿಪಡಿಸುವ ಜನಪ್ರತಿನಿಧಿಗಳಿಗಾಗಿ ಎದುರು ನೋಡುತ್ತಿತ್ತು…

 

 

ಇಂಥಾ ಸಮಯದಲ್ಲಿ ಮಲವಂತಿಗೆಯನ್ನು ಉದ್ದಾರ ಮಾಡಲು ಭಗವಂತನ ರೂಪದಲ್ಲಿ ಬಂದವರೇ ಶಾಸಕ ಹರೀಶ್ ಪೂಂಜಾ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀ ಹರೀಶ್ ಪೂಂಜಾ ಬೆಳ್ತಂಗಡಿ ವಿಧಾನಸಭಾ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಬೆಳ್ತಂಗಡಿ ಕ್ಷೇತ್ರದಲ್ಲೇ ಇರುವ ಮಲವಂತಿಗೆ ಸೇರಿ ನೂರಾರು ಗ್ರಾಮಗಳ ಅದೃಷ್ಟವೇ ಖುಲಾಯಿಸಿತು. ಮುಖ್ಯವಾಗಿ ಮಲವಂತಿಕೆ ಗ್ರಾಮಕ್ಕೆ ಬದಲಾವಣೆಯ ಹರಿಕಾರರಾಗಿ ಪರಿಣಮಿಸಿದ್ದಾರೆ ಶಾಸಕ ಹರೇಶ್ ಪೂಂಜಾ. ಅವರು ಮಲವಂತಿಗೆಯ ಜೊತೆಗೆ ಅಂಟಿಕೊಂಡಿದ್ದ ‘ಕುಗ್ರಾಮ’, ‘ನಕ್ಸಲರ ಕೊಂಪೆ’ ಎಂಬ ನಾನಾ ಹಣೆಪಟ್ಟಿಗಳಿಂದ ಮುಕ್ತಗೊಳಿಸಿ ‘ಮಾದರಿ ಗ್ರಾಮ’, ‘ಪ್ರವಾಸಿ ತಾಣ’ ಎಂಬ ಖ್ಯಾತಿ ಗಳಿಸಿಕೊಟ್ಟಿದ್ದಾರೆ..

 

 

ಮಲವಂತಿಗೆ ಗ್ರಾಮದಲ್ಲಿರುವ ಕಣ್ಮನ ಸೆಳೆಯುವ ಜಲಪಾತಗಳು, ಸುಂದರ ಪಶ್ಚಿಮ ಘಟ್ಟಗಳ ಸಾಲನ್ನು ನೋಡಲು ಪ್ರವಾಸಿಗರನ್ನು ಆಕರ್ಷಿಸುವಂತೆ ಶಾಸಕ ಹರೀಶ್ ಪೂಂಜಾ ಅಭಿವೃದ್ಧಿಪಡಿಸಿದ್ದಾರೆ.. ಪ್ರಕೃತಿಯ ಸೌಂದರ್ಯದ ಜೊತೆಗೆ ಈ ಗ್ರಾಮಕ್ಕೆ ಬರುವ ಪ್ರವಾಸಿಗರಿಗೆ ಹಳ್ಳಿಯ ಸೊಬಗಿನ ಊಟದ ಪೂರೈಕೆ, ಕಂಬಳ, ಕೆಸರುಗದ್ದೆ ಆಟಗಳು, ಯಕ್ಷಗಾನ ಮುಂತಾದ ಸಾಂಪ್ರದಾಯಕ ಜಾನಪದ ಕಲೆಗಳನ್ನು ಪರಿಚಯಪಡಿಸುವ ನಿಟ್ಟಿನಲ್ಲಿ ಹಳ್ಳಿಯ ಜನರನ್ನು ಹರೀಶ್ ಪೂಂಜಾ ಹುರಿದುಂಬಿಸಿದ್ದಾರೆ. ಇವುಗಳ ಜೊತೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಫೈರ್ ಕ್ಯಾಂಪ್, ಟ್ರೆಕಿಂಗ್, ವ್ಯವಸಾಯ ಮಾಡಿಸುವುದು ಮುಂತಾದ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಅಷ್ಟೇ ಅಲ್ಲದೆ ಪ್ರವಾಸಿಗರಿಗೆ ಅನೂಕೂಲವಾಗುವಂತೆ ತಮ್ಮ ಕ್ಷೇತ್ರವಾದ ಬೆಳ್ತಂಗಡಿ ತಾಲೂಕಿನಿಂದ ಉತ್ತಮ ರಸ್ತೆಗಳನ್ನ ಮಾಡಿಸಿ ಸಾರಿಗೆ ಸಂಪರ್ಕ ಕಲ್ಪಿಸಿದ್ದಾರೆ.

 

 

ಹರೀಶ್ ಪೂಂಜಾ ಅವರ ಈ ಸತತ ಪ್ರರಿಶ್ರಮದಿಂದಾಗಿ ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆಯ ತಾಣವಾಗಿದ್ದ ಮಲವಂತಿಗೆ ಗ್ರಾಮ ಇಂದು ಇಂದು ಇಡೀ ಕರ್ನಾಟಕದ ರಾಜ್ಯದಲ್ಲಿ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೆಸರುವಾಸಿಯಾಗಿದೆ. ಕುಗ್ರಾಮವಾಗಿದ್ದ ಮಲವಂತಿಗೆ ಇಂದು ಪ್ರವಾಸೋದ್ಯಮದ ಗ್ರಾಮವಾಗಿ ಪರಿವರ್ತನೆಗೊಂಡಿದೆ. ಮಲವಂತಿಗೆ ಗ್ರಾಮ ಪ್ರವಾಸಿತಾಣವಾಗಿ ಬದಲಾದ ಮೇಲೆ ಸ್ಥಳೀಯರಿಗೂ ಅನೇಕ ಉದ್ಯೋಗ ಸೃಷ್ಟಿಯಾಗಿ ಉದ್ಯೋಗವಂಚಿತ ನಿರೋದ್ಯೋಗಿ ಯುವಕರು ಸಣ್ಣ ಪುಟ್ಟ ಅಂಗಡಿಗಳನ್ನ ತೆರೆದು ಜೀವನಕ್ಕೆ ದಾರಿ ಮಾಡಿಕೊಳ್ಳುತ್ತಿದ್ದಾರೆ.

ನಿಸರ್ಗ ಸೌಂದರ್ಯ ಸವಿಯಲು ಬಯಸುವವರಿಗೆ ಹಳ್ಳಿಯ ರೈತರ ಮನೆಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಸಿ ಪ್ರವಾಸೋದ್ಯಮ ಮಾಡುತ್ತಿದ್ದಾರೆ..ಈಗಾಗಲೇ ಹಲವು ನಾನಾ ಭಾಗಗಳಿಂದ ಬಂದ ತಂಡಗಳು ದಿಡುಪೆಯ ಪ್ರಕೃತಿ ಸೌಂದರ್ಯ ಸವಿದುಹೋಗಿವೆ.. ಅಂದಹಾಗೆ ಇತ್ತೀಚಿಗಷ್ಟೇ ಈ ಗ್ರಾಮಕ್ಕೆ ಕರ್ನಾಟಕದ ಐಎಎಸ್ ಅಧಿಕಾರಿ ದಂಪತಿಗಳು ತಮ್ಮ ಕುಟುಂಬದ ಸಮೇತ ಆಗಮಿಸಿದ್ದರು. ಇಲ್ಲಿನ ಅತ್ಯುತ್ತಮ ವ್ಯವಸ್ಥೆ ಕಂಡು ಸ್ಥಳೀಯರಿಗೆ ಮೆಚ್ಚುಗೆ ಸೂಚಿಸಿದ್ದರು.

 

 

 

ಅಂತಿಮವಾಗಿ ಪ್ರಕೃತಿಯ ಮಡಿಲಲ್ಲಿದ್ದರೂ ಆಯಾ ಕಾಲಘಟ್ಟದ ಜನಪ್ರನಿಧಿಗಳ ನಿರ್ಲ್ಯಕ್ಷದಿಂದ ಮೂಲೆಗುಂಪಾಗಿ ಕುಗ್ರಾಮ ಎನಿಸಿಕೊಂಡು ಹಾಳಾಗಿದ್ದ ಗ್ರಾಮವನ್ನು ಅಭಿವೃದ್ದಿಪಡಿಸಿ ಚೆಂದದ ಪ್ರವಾಸಿತಾಣವನ್ನಾಗಿ ಪರಿವರ್ತಿಸಿದ ಹರೀಶ್ ಪೂಂಜಾ ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು.. ಇಂಥಾ ಜನಪರ ಕಾಳಜಿಯುಳ್ಳ ಶಾಸಕರು ಮತ್ತಷ್ಟು ಹೆಚ್ಚಾಗಲಿ ಎಂಬುದೇ ಕರ್ನಾಟಕ ಜನರ ಪಕ್ಷಾತೀತ ಆಶಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top