fbpx
ಸಮಾಚಾರ

“ಜೇಮ್ಸ್ ಚಿತ್ರದ ಪುನೀತ್ ರಾಜ್‌ಕುಮಾರ್‌ ಪಾತ್ರಕ್ಕೆ ಯಾರೂ ಧ್ವನಿ ನೀಡುತ್ತಿಲ್ಲ” ನಿರ್ಮಾಪಕ ಕೊಟ್ರು ಸ್ಪಷ್ಟನೆ: ಹೇಳಿದ್ದೇನು ನೋಡಿ

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಎರಡೂವರೆ ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.

ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್. ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಚಿತ್ರಕ್ಕೆ ತಮ್ಮ ಭಾಗದ ಸಂಪೂರ್ಣ ಚಿತ್ರಗಳನ್ನು ಮುಗಿಸಿದ ಪುನೀತ್ ರಾಜಕುಮಾರ್ ಅವರು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ವಿಧಿ ಆಟವೇ ಬೇರೆಯಾಗಿ ಅವ್ರು ನಮ್ಮಿಂದ ದೂರ ವಾಗಿದ್ದಾರೆ.

ಪುನೀತ್ ಅವರ ಅನುಪಸ್ಥಿಯಲ್ಲಿಯೇ ಬಾಕಿ ಉಳಿದಿದ್ದ ದೃಶ್ಯಗಳ ಶೂಟಿಂಗ್ ಅನ್ನು ನಿರ್ದೇಶಕ ಚೇತನ್ ಮುಗಿಸಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಿದ್ದಾರೆ. ಸದ್ಯ ಅಪ್ಪು ನಮ್ಮ ಜೊತೆ ಇರದೇ ಇರುವ ಕಾರಣ ‘ಜೇಮ್ಸ್‌ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರ ಧ್ವನಿ ನೀಡಬಹುದು ಎಂಬ ಚರ್ಚೆ ಹೊರಗಡೆ ನಡೆಯುತ್ತಿದೆ. ಈ ಬಗ್ಗೆ ಇದೀಗ ಸ್ವತಃ ನಿರ್ಮಾಪಕ ಕಿಶೋರ್ ಮಾತಾಡಿದ್ದಾರೆ.

“ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್‌ ಆಗಿರುವ ಪುನೀತ್ ಅವರ ಧ್ವನಿಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಶೂಟಿಂಗ್ ವೇಳೆ ಸುತ್ತಮುತ್ತಲಿನ ಶಬ್ದಗಳನ್ನು ನಿಯಂತ್ರಿಸಿ ಮಾಡಿ, ಪುನೀತ್ ಅವರ ಧ್ವನಿಯನ್ನೇ ಉಳಿಸಿಕೊಳ್ಳಲು ತಂತ್ರಜ್ಞಾನದಲ್ಲಿ ಆಗುತ್ತಾ ಎಂಬುದನ್ನು ನೋಡುತ್ತಿದ್ದೇವೆ’ ಎಂದು ನಿರ್ಮಾಪಕ ಕಿಶೋರ್ ಹೇಳಿದ್ದಾರೆ.

“ಚಿತ್ರಕ್ಕೆ ಯಾರ ಧ್ವನಿಯಿರುತ್ತದೆ ಎಂಬುದರ ಕುರಿತು ಮಾಹಿತಿ ನೀಡಿರುವ ಅವರು, ಹೈದರಾಬಾದ್, ಲಂಡನ್ ಸೇರಿದಂತೆ ಹಲವೆಡೆಯ ತಂತ್ರಜ್ಞರಲ್ಲಿಗೆ ಚಿತ್ರೀಕರಣದ ವೇಳೆ ಪುನೀತ್ ಧ್ವನಿ ನೀಡಿದ್ದನ್ನು ಕಳುಹಿಸಲಾಗಿದೆ. ಈಗ ತಂತ್ರಜ್ಞಾನ ಮುಂದುವರೆದಿದ್ದು, ಒಂದು ವೇಳೆ ಎಲ್ಲವೂ ಸರಿಯಾದರೆ ಚಿತ್ರಕ್ಕೆ ಪುನೀತ್ ಅವರ ಧ್ವನಿಯೇ ಇರಲಿದೆ” ಎಂದಿದ್ದಾರೆ.

“ಪುನೀತ್ ಅವರ ಪಾತ್ರಕ್ಕೆ ಯಾರು ದನಿ ನೀಡಬೇಕು ಎಂಬುದರ ಬಗ್ಗೆ ನಾವು ಸಾಕಷ್ಟು ಚಿಂತನೆ ನಡೆಸಿದೆವು. ಕೆಲವು ಮಿಮಿಕ್ರಿ ಕಲಾವಿದರನ್ನೂ ಸಹ ಪ್ರಯತ್ನಿಸಿದೆವು. ಆದರೆ ಯಾರೂ ಸಹ ಪುನೀತ್ ಧ್ವನಿಯನ್ನು ಅನುಕರಣೆ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಯಾರು ಕೂಡ 10ರಷ್ಟು ಸಹ ಅಪ್ಪು ಸರ್​ ಧ್ವನಿಯನ್ನು ಮ್ಯಾಚ್​ ಮಾಡೋಕೆ ಆಗಲ್ಲ.” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top